ಹೇಳಿ ಕೇಳಿ ಇದು ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವರ ಚೊಚ್ಚಲ ಚಿತ್ರ. ಅಂದ್ಮೇಲೆ, ಸಿನಿಮಾದಲ್ಲಿ ರವಿಚಂದ್ರನ್ ಛಾಯೆ ಇರಬಹುದು. ಮನೋರಂಜನ್ ಗೆ ಬೇಜಾನ್ ಬಿಲ್ಡಪ್ ಕೊಟ್ಟಿರಬಹುದು ಎಂಬುದನ್ನ ತಲೆಯಲ್ಲಿಟ್ಟುಕೊಂಡು ನೀವು ಥಿಯೇಟರ್ ಒಳಗೆ ಹೋದರೆ… ನಿಮಗೆ ಪರದೆ ಮೇಲೆ ಕಾಣುವ ‘ಸಾಹೇಬ’ ಬೇರೆ. ಈತ ಬಹಳ ಸರಳ. ಸಜ್ಜನಿಕೆ, ಸದ್ಬುದ್ಧಿ, ನಿಸ್ವಾರ್ಥದ ಪ್ರತಿರೂಪ ಈ ‘ಸಾಹೇಬ’.

Rating: 3.0/5 Saheba (U/A): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ! ಚಿತ್ರ: ಸಾಹೇಬ ನಿರ್ಮಾಣ: ಜಯಣ್ಣ, ಭೋಗೇಂದ್ರ ನಿರ್ದೇಶನ: ಭರತ್ ಸಂಗೀತ: ವಿ.ಹರಿಕೃಷ್ಣ ತಾರಾಗಣ: ಮನೋರಂಜನ್ ರವಿಚಂದ್ರನ್, ಶಾನ್ವಿ ಶ್ರೀವಾಸ್ತವ, ಲಕ್ಷ್ಮಿ, ಬುಲೆಟ್ ಪ್ರಕಾಶ್ ಮತ್ತು ಇತರರು ಬಿಡುಗಡೆ: ಆಗಸ್ಟ್ 25, 2017

‘ಸಾಹೇಬ’ನ ಪೂರ್ವಾಪರ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದೇ ಇದ್ದರೂ, ವಿವಿಧ ಪುಸ್ತಕಗಳನ್ನು ಓದಿ ಜ್ಞಾನ ಬೆಳೆಸಿಕೊಂಡಿರುವ ಮನು (ಮನೋರಂಜನ್ ರವಿಚಂದ್ರನ್) ಸಕಲ ವಿದ್ಯಾ ಪಾರಂಗತ.

‘ಸಾಹೇಬ’ ಮತ್ತು ಸೆಲೆಬ್ರಿಟಿ ಬಿ.ಕಾಂ ಪರೀಕ್ಷೆ ಪಾಸ್ ಆದರೆ ಸಾಕು ಎಂದು ದೇವರ ಬಳಿ ‘ಹೂ’ ಕೇಳಲು ಬರುವ ನಂದಿನಿ (ಶಾನ್ವಿ ಶ್ರೀವಾಸ್ತವ) ದಿಢೀರನೆ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಸೆಲೆಬ್ರಿಟಿ ಆಗುತ್ತಾಳೆ. ನಂದಿನಿ ಸೆಲೆಬ್ರಿಟಿ ಆಗುವುದಕ್ಕೂ, ಮನುಗೂ ಇರುವ ಲಿಂಕ್ ಏನು.? ಎಂಬುದೇ ಚಿತ್ರದ ಕಥಾಹಂದರ. ಅದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ….

ಮನರಂಜಿಸುವ ‘ಮನೋರಂಜನ್’ ಸರಳ ಹಾಗೂ ನಿಸ್ವಾರ್ಥ ಹುಡುಗನ ಪಾತ್ರದಲ್ಲಿ ಮನೋರಂಜನ್ ಅಭಿನಯ ಚೆನ್ನಾಗಿದೆ. ಡ್ಯಾನ್ಸ್ ಹಾಗೂ ಸ್ಟಂಟ್ ಸನ್ನಿವೇಶಗಳಲ್ಲಿ ಗಮನ ಸೆಳೆಯುವ ಮನೋರಂಜನ್ ಗೆ ಕನ್ನಡ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯ ಇದೆ.

‘ಜಂಭದ ಹುಡುಗಿ’ ಶಾನ್ವಿ ಮೊದಲಾರ್ಧದಲ್ಲಿ ಏನೂ ತಿಳಿಯದ ಮುಗ್ಧ ಹುಡುಗಿಯಾಗಿ, ದ್ವಿತೀಯಾರ್ಧದಲ್ಲಿ ‘ಜಂಭದ ಹುಡುಗಿ’ಯಾಗಿ ನಟಿ ಶಾನ್ವಿ ಅಭಿನಯ ಸೊಗಸಾಗಿದೆ.

ಉಳಿದವರ ಅಭಿನಯ… ನಟಿ ಲಕ್ಷ್ಮಿ, ಪ್ರಮೀಳಾ ಜೋಷಾಯಿ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಭಾ ನಟೇಶ್ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಮನೋರಂಜನ್ ಎಂಟ್ರಿ ಸೂಪರ್ ‘ಸಾಹೇಬ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ರವಿಚಂದ್ರನ್ ಎಂಟ್ರಿ ಹೇಳಿ ಮಾಡಿಸಿದ ಹಾಗಿದೆ. ‘ಯಾರೇ ನೀನು ರೋಜಾ ಹೂವೆ…’ ಹಾಡಿನ ಮೂಲಕ ಬೆಳ್ಳಿತೆರೆ ಮೇಲೆ ಮಿನುಗಲು ಆರಂಭಿಸುವ ಮನೋರಂಜನ್ ನಿಜಕ್ಕೂ ಭರವಸೆ ಮೂಡಿಸುತ್ತಾರೆ.

‘ಕಥೆ’ಯೇ ಹೀರೋ ಇದು ಮನೋರಂಜನ್ ಚೊಚ್ಚಲ ಚಿತ್ರ ಆಗಿದ್ದರೂ, ಸಿನಿಮಾದಲ್ಲಿ ಹೀರೋಗಿಂತ ಕಥೆಯೇ ಹೈಲೈಟ್. ಕಥೆಯಲ್ಲಿ ಪಾತ್ರವಾಗಿ ಮಾತ್ರ ಕಾಣುವ ಮನೋರಂಜನ್ ‘ಸಿಂಪಲ್ ಹುಡುಗ’ನಾಗಿ ಪ್ರೇಕ್ಷಕರ ಮನಗೆಲ್ಲುತ್ತಾರೆ.

ನಿಧಾನಗತಿ ನಿಧಾನಗತಿಯಲ್ಲಿ ಸಾಗುವ ‘ಸಾಹೇಬ’ ಸಿನಿಮಾ ಅಲ್ಲಲ್ಲಿ ಬೋರ್ ಆಗುತ್ತೆ ಅಂದ್ರೆ ಅದಕ್ಕೆ ನೇರ ಹೊಣೆ ನಿರ್ದೇಶಕರದ್ದು. ಸಿನಿಮಾದಲ್ಲಿ ಕಾಮಿಡಿ ಕಲಾವಿದರಿದ್ದರೂ, ಕಾಮಿಡಿ ಇಲ್ಲ. ಕೆಲ ದೃಶ್ಯಗಳು ಪರಿಣಾಮಕಾರಿಯಾಗಿಲ್ಲ. ಕಥೆಯಲ್ಲಿ ರೋಚಕ ತಿರುವು ಇಲ್ಲ. ಡೈರೆಕ್ಟರ್ ಭರತ್ ಇನ್ನೂ ಪ್ರಯತ್ನ ಪಟ್ಟಿದ್ದರೆ, ‘ಸಾಹೇಬ’ ಸಿನಿಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತೇನೋ.?!
ಕಮಾಲ್ ಮಾಡದ ವಿ.ಹರಿಕೃಷ್ಣ ಸಂಗೀತ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ‘ಸಾಹೇಬ’ ಹಾಡುಗಳಲ್ಲಿ ಮ್ಯಾಜಿಕ್ ಇಲ್ಲ. ಚಿತ್ರಮಂದಿರದಿಂದ ಹೊರಗೆ ಬಂದ್ಮೇಲೆ ‘ಬಾ ಬಾ ಸಾಹೇಬ..’ ಬಿಟ್ಟರೆ ಇನ್ಯಾವ ಹಾಡೂ ನೆನಪಲ್ಲಿ ಉಳಿಯಲ್ಲ.

ಫೈನಲ್ ಸ್ಟೇಟ್ಮೆಂಟ್ ಸಿನಿಮಾದಲ್ಲಿ ‘ಪಂಚ್’ ಇಲ್ಲ ಅಂದರೂ, ಮನರಂಜನೆಗೆ ಮೋಸ ಮಾಡದ ‘ಸಾಹೇಬ’ ಚಿತ್ರವನ್ನ ಇಡೀ ಕುಟುಂಬ ಕೂತು ಆರಾಮಾಗಿ ನೋಡಬಹುದು.