ಸಿನಿಮಾದ ಪೋಸ್ಟರ್‌ಗಳಲ್ಲಿ ಕಾಣಿಸುತ್ತಿರುವ ನಾಲ್ವರೂ ನಾಯಕಿಯರು ಟ್ರೇಲರ್‌ನಲ್ಲಿ ಬಂದು ಹೋಗುತ್ತಾರೆ. ಅವರು ಪ್ರೀತಿ ಸುರಿದು ಕೈಬಿಟ್ಟವರು ಇರಬಹುದು ಎಂಬ ಊಹೆ ನೋಡುಗರ ಮನದಲ್ಲಿ ಮೂಡುತ್ತದೆ.

‘ಮುಗುಳುನಗೆ’ ಚಿತ್ರದ ಟ್ರೇಲರ್‌ ಯುಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆರಂಭದಲ್ಲೇ ಒಂದಿಷ್ಟು ಹುಡುಗಿಯರು ಗೋಲ್ಡನ್‌ ಸ್ಟಾರ್ ಗಣೇಶ್‌ರ ನಗು ಹೊಗಳುತ್ತಾರೆ. ಅವರ ಮಾತಿಗೆ ಪುಷ್ಟಿ ನೀಡುವಂತೆ ಒಮ್ಮೆ ಮುದ್ದಾಗಿ, ಒಮ್ಮೆ ವ್ಯಂಗ್ಯವಾಗಿ, ಒಮ್ಮೆ ಮನತುಂಬಿ ನಗುತ್ತಾರೆ ಗಣೇಶ್.

ಸಿನಿಮಾದ ಪೋಸ್ಟರ್‌ಗಳಲ್ಲಿ ಕಾಣಿಸುತ್ತಿರುವ ನಾಲ್ವರೂ ನಾಯಕಿಯರು ಟ್ರೇಲರ್‌ನಲ್ಲಿ ಬಂದು ಹೋಗುತ್ತಾರೆ. ಅವರು ಪ್ರೀತಿ ಸುರಿದು ಕೈಬಿಟ್ಟವರು ಇರಬಹುದು ಎಂಬ ಊಹೆ ನೋಡುಗರ ಮನದಲ್ಲಿ ಮೂಡುತ್ತದೆ.

‘ನೋವಾದಾಗ ಎಲ್ಲರು ಅಳುತ್ತಾರೆ, ಆದರೆ ನಾನು ನಗುತ್ತೇನೆ’ ಎನ್ನುವ ಗಣೇಶ್ ಅವರ ಮಾತು ಇದೊಂದು ಭಾವನಾತ್ಮಕ ಸಿನಿಮಾ ಎಂಬುದನ್ನು ಖಾತ್ರಿ ಪಡಿಸುತ್ತದೆ. ಟ್ರೇಲರ್‌ನ ಕೊನೆಯಲ್ಲಿ ಸೊನುನಿಗಮ್ ಧ್ವನಿಯಲ್ಲಿ ಮೂಡಿ ಬರುವ  ‘ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ’ ಹಾಡಿನ ಸಾಲು ಗುನುಗಿಕೊಳ್ಳುವಂತಿದೆ.

‘ಮುಗುಳುನಗೆ’ ಸಿನಿಮಾದ ಟ್ರೇಲರ್‌ ಸೋಮವಾರವಷ್ಟೇ ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಇಲ್ಲಿಯವರೆಗೆ ಟ್ರೇಲರ್‌ ಅನ್ನು 3.80 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನಿರ್ದೇಶಕ ಯೋಗರಾಜ್‌ ಭಟ್ ಮತ್ತು ಗಣೇಶ್ 10 ವರ್ಷಗಳ ಬಳಿಕ ’ಮುಗುಳುನಗೆ’ ಮೂಲಕ ಮತ್ತೆ ಒಂದಾಗುತ್ತಿದ್ದಾರೆ.