1 churicopy 1516954451

Churikatte Kannada Movie Review

ಸದ್ದಿಲ್ಲದೆ ನಡೆಯೋ ಟಿಂಬರ್ ಮಾಫಿಯಾ, ಕಳ್ಳರನ್ನ ಮಟ್ಟಹಾಕಲು ಹೋರಾಟ ಮಾಡುವ ದಕ್ಷ ಅಧಿಕಾರಿ, ಪ್ರಾಮಾಣಿಕರ ಜೊತೆ ಅಪ್ರಾಮಾಣಿಕರು, ಸುಂದರವಾದ ಊರು ಅದಕ್ಕೆ ಜೊತೆಯಾಗಿ ಕಾಡು. ಕ್ಷಣ ಕ್ಷಣಕ್ಕೂ ಕಥೆಯಲ್ಲಿ ಕುತೂಹಲದ ತಿರುವು. ಒಂದೆಡೆ ಮಾಫಿಯಾ ದಂಧೆ ಮತ್ತೊಂದೆಡೆ ಪ್ರೀತಿಗಾಗಿ ಹೋರಾಟ. ಹೀಗೆ ಸಾಕಷ್ಟು ಕುತೂಹಲವನ್ನ ಹೊತ್ತು ತಂದಿರುವ ವಿಭಿನ್ನ ಸಿನಿಮಾ ಚೂರಿಕಟ್ಟೆ. ಮೇಕಿಂಗ್ ನಿಂದ ಸದ್ದು ಮಾಡಿದ್ದ ಚೂರಿಕಟ್ಟೆ ಚಿತ್ರ ಹೇಗಿದೆ? ಸಂಪೂರ್ಣ ವಿಮರ್ಶೆ ಇಲ್ಲಿದೆ ಮುಂದೆ ಓದಿ

Rating: 3.5/5
ನಿರ್ದೇಶನ; ರಾಘು ಶಿವಮೊಗ್ಗ
ಸಂಗೀತ: ವಾಸುಕಿ ವೈಭವ್
ಸಂಕಲನ; ಪ್ರಕಾಶ್ ಕರಿಂಜ
ಛಾಯಾಗ್ರಹಣ: ಅದ್ವೈತ ಗುರುಮೂರ್ತಿ
ತಾರಾಗಣ; ಪ್ರವೀಣ್ ತೇಜ್, ಅಚ್ಚುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರೇರಣಾ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ ಇನ್ನೂ ಅನೇಕರು

ಸಂಚೊಂದು ಇಲ್ಲಿ ಸಂಚಾರಿ

ಪೊಲೀಸ್ ಆಗಬೇಕೆಂದು ಕನಸು ಕಟ್ಟಿ ಹೋರಾಟ ಮಾಡುವ ನಾಯಕ(ಪ್ರವೀಣ್ ತೇಜ್ ) ಪೊಲೀಸ್ ಆಗುವ ಮುನ್ನವೇ ತನ್ನದೇ ಊರಿನಲ್ಲಿ ನಡೆಯುವ ಟಿಂಬರ್ ಮಾಫಿಯಾವನ್ನ ಬಯಲಿಗೆಳೆಯುವ ಪ್ರಯತ್ನ ಮಾಡುತ್ತಾನೆ. ಇದರ ಮಧ್ಯೆ ನವೀರಾದ ಪ್ರೇಮಕಥೆ ಪ್ರಾರಂಭವಾಗುತ್ತದೆ. ಪ್ರೀತಿಯಲ್ಲಿ ಬೀಳುವ ನಾಯಕನಿಗೆ ಟಿಂಬರ್ ಮಾಫಿಯಾದಲ್ಲಿ ಸಿಲುಕಿಕೊಳ್ಳುವ ತನ್ನ ಪ್ರೇಮವನ್ನ ಸಾಹಸ ಎದುರಾಗುತ್ತದೆ. ಕನಸು, ಪ್ರೀತಿ, ಕಾಡು ಯಾವುದರಲ್ಲಿ ನಾಯಕನಿಗೆ ಜಯ ಸಿಗುತ್ತದೆ ಎನ್ನುವುದೇ ಚೂರಿಕಟ್ಟೆ ಸಿನಿಮಾದ ಒನ್ ಲೈನ್ ಸ್ಟೋರಿ.

ಅಭಿನಯಕ್ಕೆ ಸಿಗುತ್ತಿದೆ ಪ್ರಶಂಸೆ

ನಾಯಕನಾಗಿ ಅಭಿನಯಿಸಿರುವ ನಟ ಪ್ರವೀಣ್ ತೇಜ್ ಅಭಿನಯ ಉತ್ತಮವಾಗಿದೆ. ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿಕೊಂಡರೆ ಪ್ರವೀಣ್ ಅಭಿನಯ ಮತ್ತು ಮ್ಯಾನರಿಸಂ ನಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತವೆ. ಇನ್ನೂ ನಾಯಕಿಯಾಗಿ ಕಾಣಿಸಿಕೊಂಡಿರುವ ಪ್ರೇರಣಾ ಕುಂಬಂ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಖಳನಾಯಕನಾಗಿ ಬಾಲಾಜಿ ಮನೋಹರ್

ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಬಾಲಾಜಿ ಮನೋಹರ್ ಚೂರಿಕಟ್ಟೆ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಾಲಾಜಿ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ ಕೊಟ್ಟಿದ್ದಾರೆ. ಉಳಿದಂತೆ ಅಚ್ಚುತ್ ಕುಮಾರ್, ಶರತ್ ಲೋಹಿತಾಶ್ವ ಎಂದಿನಂತೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಉತ್ತಮವಾಗಿದೆ ಛಾಯಾಗ್ರಹಣ

ಚೂರಿಕಟ್ಟೆ ಸಿನಿಮಾದ ಟೀಸರ್ ಮತ್ತು ಹಾಡುಗಳು ಪ್ರೇಕ್ಷಕರನ್ನ ಸಾಕಷ್ಟು ಇಂಪ್ರೆಸ್ ಮಾಡಿತ್ತು. ಅದೇ ರೀತಿಯಲ್ಲಿ ಸಿನಿಮಾದಲ್ಲಿಯೂ ಕೂಡ ವಾಸುಕಿ ವೈಭವ್ ಅವರ ಹಿನ್ನಲೆ ಸಂಗೀತ ಹಾಗೂ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಉತ್ತಮವಾಗಿ ಮೂಡಿಬಂದಿದೆ.

ಚಿತ್ರಕಥೆಯಲ್ಲಿ ಬೇಕಿತ್ತು ಚುರುಕು

ಚೂರಿಕಟ್ಟೆ ಸಿನಿಮಾದಲ್ಲಿ ಕುತೂಹಲಗಳು ಹೆಚ್ಚಾಗಿದೆ ಆದರೆ ಚಿತ್ರಕಥೆ ಮತ್ತಷ್ಟು ಚುರುಕಾಗಿರಬೇಕಿತ್ತು. ಅದರ ಜೊತೆಯಲ್ಲಿ ಸಾಹಸ ದೃಶ್ಯಗಳನ್ನ ಪರದೆ ಮೇಲೆ ನೋಡುವಾಗ ನೀರಸ ಎನ್ನುವಂತೆ ಭಾಸವಾಗುತ್ತದೆ.

ನೋಡಬಹುದಾದ ಸಿನಿಮಾ ಚೂರಿಕಟ್ಟೆ

ಹೊಸ ರೀತಿಯ ಕಥೆಯನ್ನ ಬಯಸುವ ಪ್ರೇಕ್ಷಕರಿಗೆ ಚೂರಿಕಟ್ಟೆ ಉತ್ತಮವಾದ ಚಿತ್ರ. ಕಾಡು ಹಾಗೂ ಜೀವನ ಎರಡನ್ನು ಉತ್ತಮವಾಗಿ ಬೆಸೆಯುವ ಪ್ರಯತ್ನದಲ್ಲಿ ನಿರ್ದೇಶಕ ರಾಘು ಶಿವಮೊಗ್ಗ ಯಶಸ್ವಿ ಆಗಿದ್ದಾರೆ. ವಾರಾಂತ್ಯಕ್ಕೆ ಕುಟುಂಬದ ಜೊತೆಯಲ್ಲಿ ಕುಳಿತು ನೋಡಲು ಚೂರಿಕಟ್ಟೆ ಉತ್ತಮವಾದ ಚಿತ್ರ