3 gante 5 1516347877

3 Gante 30 Dina 30 Second Movie Review

ಪ್ರೀತಿನಾ ನಂಬುವ ನಾಯಕ. ಪ್ರೀತಿ ಅಂದ್ರೆ ಅಸಹ್ಯ ಪಡುವ ನಾಯಕಿ. ಪ್ರೀತಿ ಸತ್ಯನಾ ಅಥವಾ ಮಿತ್ಯನಾ…? ಪ್ರೀತಿ ಅಂದ್ರೆ ಏನು? ಎಂಬುದನ್ನ ನಾಯಕ, ನಾಯಕಿಗೆ ಅರ್ಥ ಮಾಡಿಸುವ ಸಾಹಸವೇ 3 ಗಂಟೆ 30 ದಿನ 30 ಸೆಕೆಂಡ್ ಸಿನಿಮಾ. ಪೂರ್ತಿ ವಿಮರ್ಶೆ ಮುಂದೆ ನೀಡಲಾಗಿದೆ.

Rating: 3.0/5
ಚಿತ್ರ: 3 ಗಂಟೆ 30 ದಿನ 30 ಸೆಕೆಂಡ್
ನಿರ್ದೇಶಕ: ಜಿ.ಕೆ ಮಧುಸೂಧನ್
ನಿರ್ಮಾಪಕ: ಚಂದ್ರಶೇಖರ್ ಆರ್ ಪದ್ಮಶಾಲಿ
ಸಂಗೀತ: ಶ್ರೀಧರ್ ವಿ ಸಂಭ್ರಮ್
ಕಲಾವಿದರು: ಅರುಣ್ ಗೌಡ, ಕಾವ್ಯಶೆಟ್ಟಿ, ದೇವರಾಜ್, ಸುಧಾರಾಣಿ, ಚಂದ್ರಶೇಖರ್ ಮತ್ತು ಇತರರು.
ಬಿಡುಗಡೆ: ಜನವರಿ 19

ಪಕ್ಕಾ ಲವ್ ಸ್ಟೋರಿ

‘3 ಗಂಟೆ 30 ದಿನ 30 ಸೆಕೆಂಡ್’ ಅಂತ ಟೈಟಲ್ ನೋಡಿ, ಇದ್ಯಾವುದೋ ಸಸ್ಪೆನ್ಸ್ ಸಿನಿಮಾ ಎಂದುಕೊಂಡಿದ್ದರೇ, ಅದು ತಪ್ಪು. ಯಾಕಂದ್ರೆ, ಇದೊಂದು ಪಕ್ಕಾ ಲವ್ ಸ್ಟೋರಿ. ಹಾಗಿದ್ರೆ, ಈ ಟೈಟಲ್ ಯಾಕೆ ಅಂತ ನೀವು ಯೋಚನೆ ಮಾಡಬಹುದು? ಅಲ್ಲೇ ಇರೋದು ಕಥೆ. ‘3 ಗಂಟೆಗೆ ಒಂದು ಕಥೆ, 30 ದಿನಕ್ಕೆ ಒಂದು ಕಥೆ, ಮತ್ತು 30 ಸೆಕೆಂಡ್ ಗೂ ಒಂದು ಅರ್ಥ ಚಿತ್ರದಲ್ಲಿದೆ.

ಪ್ರೀತಿ ಸತ್ಯನಾ? ಮಿತ್ಯನಾ?

ಯಾವುದು ಕೇಸ್ ಇಲ್ಲದೆ ಖಾಲಿ ಕೂತಿರುವ ವಕೀಲ. ರಾಜಕಾರಣಿಗಳ ಹಗರಣಗಳನ್ನ ಯಾವುದೇ ಮುಲಾಜಿಲ್ಲದೇ ಬಯಲಿಗೆಳೆಯುವ ಚಾನಲ್ ನಿರೂಪಕಿ. ಪ್ರೀತಿ ಸತ್ಯನಾ ಅಥವಾ ಮಿತ್ಯನಾ ಎಂಬ ವಿಷ್ಯದ ಕುರಿತು ಚಾನಲ್ ನಲ್ಲಿ ಚರ್ಚೆಯಾಗುವ ವೇಳೆ, ವಕೀಲ ಅವಿನಾಶ್ ಮತ್ತು ನಿರೂಪಕಿ ಶರ್ಮೀಳಾ ಇಬ್ಬರು ಬಹಿರಂಗ ಸವಾಲು ಸ್ವೀಕರಿಸುತ್ತಾರೆ. ಅದೇನಪ್ಪಾ ಅಂದ್ರೆ, 30 ದಿನದಲ್ಲಿ ಶರ್ಮೀಳಾಗೆ ಅವಿನಾಶ್ ಪ್ರೀತಿ ಹುಟ್ಟಿಸಬೇಕು.

ಪ್ರೀತಿಯ ಪಯಣ

ಅಲ್ಲಿಂದ ನಿಜವಾದ ಕಥೆ ಆರಂಭವಾಗುತ್ತೆ. ಟಿವಿ ನಿರೂಪಕಿ ಶರ್ಮಿಳಾಗೆ, ನಾಯಕ ಅವಿನಾಶ್ ಪ್ರೀತಿಯ ಪರಿಚಯ ಮಾಡೋದಕ್ಕೆ ಪಯಣ ಆರಂಭಿಸುತ್ತಾರೆ. ಈ ಪಯಣದಲ್ಲಿ, ಪ್ರೀತಿ, ಸಂಬಂಧ, ಕುಟುಂಬದ ಮೌಲ್ಯ, ವೀರಯೋಧನ ಯಶೋಗಾಥೆ ಹೀಗೆ ಅನೇಕ ವಿಷ್ಯಗಳು ಗಮನ ಸೆಳೆಯುತ್ತೆ. ಅಂತಿಮವಾಗಿ, ಈ ಸವಾಲನ್ನ ಯಾರು ಗೆಲ್ತಾರೆ ಎಂಬುದು ಚಿತ್ರದ ಅಸಲಿ ಕಥೆ.

ನಾಯಕ-ನಾಯಕಿ ಅಭಿನಯ?

ವಕೀಲನ ಪಾತ್ರವಿದ್ದರೂ, ಕೋರ್ಟ್ ನಲ್ಲಿ ವಾದ ಮಾಡಲ್ಲ ಈ ನಾಯಕ. ಆದ್ರೆ, ಪ್ರೀತಿ ಎಂಬ ಪ್ರಕರಣದಲ್ಲಿ ವಾದ ಮಾಡುವ ಪಾತ್ರದಲ್ಲಿ ನಟ ಅರುಣ್ ಗೌಡ, ಇಷ್ಟವಾಗ್ತಾರೆ. ಡ್ಯಾನ್ಸ್, ಫೈಟ್ ನಲ್ಲೂ ಗಮನ ಸೆಳೆದಿಯುತ್ತಾರೆ. ಟಿವಿ ನಿರೂಪಕಿ ಪಾತ್ರದಲ್ಲಿ ನಟಿ ಕಾವ್ಯಶೆಟ್ಟಿ ನೈಜ ಅಭಿನಯ ಮಾಡಿದ್ದಾರೆ. ಇಬ್ಬರು ಜೋಡಿ ಕೂಡ ಇಷ್ಟವಾಗುತ್ತೆ.

ಕಲಾವಿದರು ಉತ್ತಮ ಅಭಿನಯ

ಚಾನಲ್ ಮಾಲೀಕನಾಗಿ ಎಡಕಲ್ಲು ಚಂದ್ರುಶೇಖರ್ ನೈಜ ಅಭಿನಯ ನೀಡಿದ್ದಾರೆ. ವೀರಯೋಧನ ಪಾತ್ರದಲ್ಲಿ ದೇವರಾಜ್, ಅವರ ಪತ್ನಿ ಪಾತ್ರದಲ್ಲಿ ಸುಧಾರಾಣಿ ಇಷ್ಟವಾಗ್ತಾರೆ. ಉಳಿದಂತೆ ಸುಂದರ್, ಯಮುನಾ, ಜಯಲಕ್ಷ್ಮಿ ಪಾಟೀಲ್, ಟಿ.ಎಸ್‌. ನಾಗಾಭರಣ, ಅನಂತ ವೇಲು, ರಮೇಶ್‌ ಭಟ್‌, ಶ್ರೀನಾಥ್ ವಸಿಷ್ಠ, ಹನುಮಂತೇ ಗೌಡ, ಯತಿರಾಜ್ ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಗಮನ ಸೆಳೆಯುವ ಅಂಶಗಳು

ಟಿವಿ ವಾಹಿನಿಗಳ ಪ್ರಭಾವ, ರಾಜಕಾರಣಿಗಳು ಹಗರಣ, ಮುಖ್ಯಮಂತ್ರಿ ಸಿದ್ದರಾಮಾಯ್ಯ ಅವರ ವಾಚ್ ಪ್ರಕರಣ, ಕಿಸ್ ಆಫ್ ಲವ್ ಪ್ರಕರಣ, ಲೀವಿಂಗ್ ಟು ಗೆದರ್ ಸೇರಿದಂತೆ ಹಲವು ಬೆಳವಣಿಗೆಗಳು ಚಿತ್ರದಲ್ಲಿ ಗಮನ ಸೆಳೆಯುತ್ತೆ.

ತಾಂತ್ರಿಕವಾಗಿ ಸಿನಿಮಾ

ನಿರ್ದೇಶಕ ಜಿಕೆ ಮಧುಸೂಧನ್ ಚೊಚ್ಚಲ ಸಿನಿಮಾವನ್ನ ತಕ್ಕ ಮಟ್ಟಿಗೆ ಚೆನ್ನಾಗಿ ಮಾಡಿದ್ದಾರೆ. ಆದ್ರೆ, ಚಿತ್ರಕಥೆ ನಿಧಾನವಾಗಿದೆ ಎಂಬ ಭಾವನೆ ನೋಡುಗರದ್ದು. ಸಿನಿಮಾಟೋಗ್ರಫಿ ಗಮನ ಸೆಳೆಯುತ್ತೆ. ಚಿತ್ರದ ಹಾಡುಗಳು ಚಿತ್ರಕಥೆಗೆ ಸಾಥ್ ಕೊಟ್ಟಿದೆ. ಸ್ವಮೇಕ್ ಸಿನಿಮಾ ಎಂಬುದು ಚಿತ್ರದ ಶಕ್ತಿ. ಸಿನಿಮಾವನ್ನ ಒಮ್ಮೆ ನೋಡಬಹುದು.