ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂದು ಹೊರಟ ಇಬ್ಬರು ಸ್ನೇಹಿತರ ಬದುಕಿನ ಸುತ್ತ ನಡೆಯುವ ಕಥೆಯೇ ‘ಸರ್ವಸ್ವ’. ಸಾಮಾನ್ಯವಾದ ಕಮರ್ಷಿಯಲ್ ಚಿತ್ರಗಳಂತೆ ‘ಸರ್ವಸ್ವ’ ಚಿತ್ರವನ್ನ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಶ್ರೇಯಸ್ ಕಬಾಡಿ.

ಚಿತ್ರ: ಸರ್ವಸ್ವ
ನಿರ್ದೇಶಕ: ಶ್ರೇಯಸ್ ಕಬಾಡಿ
ನಿರ್ಮಾಪಕ: ವಿಮಲ್, ವಾಮದೇವ್
ಕಲಾವಿದರು: ತಿಲಕ್, ರನುಷಾ ಕಾಶ್ವಿ, ಚೇತನ್, ಸಾತ್ವಿಕಾ
ಸಂಗೀತ ನಿರ್ದೇಶನ: ಶ್ರೀಧರ್‌ ವಿ. ಸಂಭ್ರಮ್
ಬಿಡುಗಡೆ: ಅಕ್ಟೋಬರ್ 27, 2017

ಚಿತ್ರದ ಮೊದಲಾರ್ಧದಲ್ಲಿ ಸ್ನೇಹ, ಪ್ರೀತಿಯ ಸಾರಂಶ ಆಕರ್ಷಕವಾಗಿದೆ. ದ್ವಿತೀಯಾರ್ಧದಲ್ಲಿ ಆ ಸ್ನೇಹ, ಪ್ರೀತಿಗೆ ಭಾವುಕ ಕ್ಷಣಗಳು ಬೆರತು ಚಿತ್ರವು ಹೊಸಹಾದಿಗೆ ಹೊರಳುತ್ತದೆ. ಚಿತ್ರದ ಕಥೆ ಬಗ್ಗೆ ಹೇಳುವುದಾದರೇ ‘ಸರ್ವಸ್ವ’ ಚಿತ್ರದಲ್ಲೊಂದು ಸಿನಿಮಾ ನಡೆಯುತ್ತೆ. ಆ ಕಥೆ ನಾವು ಹೇಳುವುದಕ್ಕಿಂತ ನೀವು ಚಿತ್ರಮಂದಿರದಲ್ಲಿ ನೋಡಿದರೇ ಒಳ್ಳೆಯದು.

ತಿಲಕ್ ಮತ್ತು ಚೇತನ್ ತಮ್ಮ ಅಭಿನಯದಲ್ಲಿ ಇಷ್ಟವಾಗ್ತಾರೆ. ದೃಷ್ಟಿದೋಷಯುಳ್ಳ ಹುಡುಗಿ ಪಾತ್ರದಲ್ಲಿ ರನುಷಾ ಗಮನ ಸೆಳೆದ್ರೆ, ಸಾತ್ವಿಕಾ ಕೂಡ ಅಚ್ಚುಕಟ್ಟಾದ ಅಭಿನಯ ಮಾಡಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್ ಸಂಗೀತ ಸಂಯೋಜನೆಯ ಹಾಡುಗಳು ಕೇಳಲು ಇಂಪಾಗಿವೆ. ಭೂಪಿಂದರ್ ಪಾಲ್‌ ಸಿಂಗ್ ರೈನಾ ಅವರ ಛಾಯಾಗ್ರಹಣ ಆಕರ್ಷಕವಾಗಿದೆ.

ಸಿನಿಮಾ ರಂಗಕ್ಕೆ ಬರಲು ಹಾಗೂ ಸ್ನೇಹಕ್ಕೆ ಮಹತ್ವ ಕೊಡುವವರು ನೋಡಬೇಕಾದ ಸಿನಿಮಾ ‘ಸರ್ವಸ್ವ’.