ಸಾಮಾಜಿಕ ಹೋರಾಟಗಾರ, ವಕೀಲ, ಡಾಕ್ಟರ್ ಹೀಗೆ ಒಬ್ಬೊಬ್ಬರೇ ಕೊಲೆ ಆಗ್ತಾರೆ. ಈ ಸರಣೆ ಕೊಲೆಯನ್ನ ಭೇದಿಸುವ ರೋಚಕ ಕಥೆಯೇ ‘ವಿಸ್ಮಯ’. ಅರ್ಜುನ್ ಸರ್ಜಾ ಅವರ 150ನೇ ಸಿನಿಮಾ ಎಂಬ ಟ್ಯಾಗ್ ಲೈನ್ ಹೊಂದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲ್ಲಿಂಗ್ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ…..

Rating: 3.0/5
ಚಿತ್ರ: ವಿಸ್ಮಯ
ನಿರ್ಮಾಣ: ಫ್ಯಾಷನ್ ಫಿಲ್ಮ್ ಫ್ಯಾಕ್ಟರಿ
ನಿರ್ದೇಶನ: ಅರುಣ್ ವೈದ್ಯನಾಥನ್
ಸಂಗೀತ: ಎಸ್.ನವೀನ್
ಛಾಯಾಗ್ರಹಣ: ಅರವಿಂದ್ ಕೃಷ್ಣ
ಸಂಕಲನ: ಸತೀಶ್ ಸೂರ್ಯ
ತಾರಾಗಣ: ಅರ್ಜುನ್ ಸರ್ಜಾ, ಪ್ರಸನ್ನ, ವರಲಕ್ಷ್ಮಿ ಶರತ್ ಕುಮಾರ್, ಶ್ರುತಿ ಹರಿಹರನ್, ಸುಹಾಸಿನಿ, ಸುಮನ್ ಮತ್ತು ಇತತರು
ಬಿಡುಗಡೆ ದಿನಾಂಕ: ಜುಲೈ 28, 2017

‘ವಿಸ್ಮಯ’ ಕಥಾ ಹಂದರ
‘ವಿಸ್ಮಯ’ ಸರಣೆ ಕೊಲೆಯ ಸುತ್ತಾ ನಡೆಯುವ ರೋಚಕ ಕಥೆ. ಸಾಮಾಜಿಕ ಹೋರಾಟಗಾರ, ಡಾಕ್ಟರ್, ವಕೀಲ ಹೀಗೆ ಒಬ್ಬೊಬ್ಬರೇ ವಿಕೃತವಾಗಿ ಕೊಲೆ ಆಗ್ತಾರೆ. ಈ ಕೊಲೆ ಯಾರು ಮಾಡ್ತಾರೆ? ಯಾಕೆ ಮಾಡ್ತಾರೆ ಎನ್ನುವುದು ಇಡೀ ಚಿತ್ರದ ಚಿತ್ರಕಥೆ.

ಆಪರೇಷನ್ ‘ವಿಸ್ಮಯ’
ಈ ಸರಣೆ ಹಂತಕರನ್ನ ಪತ್ತೆ ಹಚ್ಚುವ ಜವಾಬ್ದಾರಿ ಪೊಲೀಸ್ ಗೆ ಇಲಾಖೆ ದೊಡ್ಡ ಸವಾಲಾಗುತ್ತೆ. ಇದಕ್ಕಾಗಿ ಪೊಲೀಸ್ ಇಲಾಖೆ ಡಿ.ಎಸ್.ಪಿ ರಂಜಿತ್ ಕಾಳಿದಾಸ್ (ಅರ್ಜುನ್ ಸರ್ಜಾ) ಮತ್ತು ತಂಡಕ್ಕೆ ಈ ಪ್ರಕರಣವನ್ನ ವಹಿಸುತ್ತೆ. ಅಲ್ಲಿಂದ ಹಂತಕನನ್ನು ಹಿಡಿಯುವ ಆಪರೇಷನ್ ಶುರು.

ಕಿಲ್ಲರ್ ವರ್ಸಸ್ ಪೊಲೀಸ್
ಮುಂದಿನ ಕೊಲೆ ಯಾರದ್ದು ಎಂಬ ಸುಳಿವು ಕೊಟ್ಟ ಕೊಲೆ ಮಾಡುವ ಹಂತಕ ಹಾಗೂ ಅದನ್ನ ಭೇದಿಸಲು ಪ್ರಯತ್ನ ಪಡುವ ಡಿ.ಎಸ್.ಪಿ ರಂಜಿತ್ ಕಾಳಿದಾಸ್ ಅವರ ತಂತ್ರ-ಪ್ರತಿತಂತ್ರ ನೋಡಲು ರೋಚಕವಾಗಿದೆ. ಇನ್ನು ಚಿತ್ರದ ಕೊನೆಯ ಕ್ಷಣದವರೆಗೂ ಕೊಲೆಗಾರ ಯಾರು ಎಂದು ಬಿಟ್ಟುಕೊಡದ ಚಿತ್ರಕಥೆ, ಪ್ರೇಕ್ಷಕರನ್ನ ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡುತ್ತೆ.

ಅರ್ಜುನ್ ಸರ್ಜಾ ಅಭಿನಯ
ಅರ್ಜುನ್ ಸರ್ಜಾ ಅವರಿಗೆ ಈ ಕಥೆ ಸೂಕ್ತವಾಗಿದೆ. ಈಗಾಗಲೇ ಅರ್ಜುನ್ ಸರ್ಜಾ ಇಂತಹ ಪಾತ್ರಗಳನ್ನ ಬೇಕಾದಷ್ಟು ಮಾಡಿದ್ದಾರೆ. ಆದ್ರೂ, ಪೊಲೀಸ್ ಆಫೀಸರ್ ಆಗಿ ಅರ್ಜುನ್ ಸರ್ಜಾ ಅವರನ್ನ ನೋಡುವುದು ಖುಷಿ ಕೊಡುತ್ತೆ. ‘ಅಟ್ಟಹಾಸ’, ‘ಗೇಮ್’ ರೀತಿಯಲ್ಲೇ ವಿಸ್ಮಯದಲ್ಲೂ ಸೀರಿಯಸ್ ಪೊಲೀಸ್ ಆಫೀಸರ್ ಆಗಿ ಗಮನ ಸೆಳೆಯುತ್ತಾರೆ. ಇಡೀ ಚಿತ್ರದ ಕೇಂದ್ರ ಬಿಂದು ಕೂಡ ಅರ್ಜುನ್ ಸರ್ಜಾ ಅವರೇ.

ಶ್ರುತಿ ಹರಿಹರನ್
ಚಿತ್ರದಲ್ಲಿ ಶ್ರುತಿ ಹರಿಹರನ್ ಅವರದ್ದು ಅರ್ಜುನ್ ಸರ್ಜಾ ಅವರ ಪತ್ನಿ ಪಾತ್ರ. ಪಕ್ಕಾ ಟ್ರಡಿಷ್ನಲ್ ಹುಡುಗಿ. ಚಿತ್ರದಲ್ಲಿ ಈ ಪಾತ್ರಕ್ಕೆ ಹೆಚ್ಚೇನೂ ಮಹತ್ವವಿಲ್ಲವಾದರೂ, ಗೃಹಿಣಿಯಾಗಿ ಶ್ರುತಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಉಳಿದವರು ಉತ್ತಮ ಸಾಥ್
ಅರ್ಜುನ್ ಸರ್ಜಾ ಜೊತೆಯಲ್ಲಿ ಕಾಣಿಸಿಕೊಳ್ಳುವ ವರಲಕ್ಷ್ಮಿ ಶರತ್ ಕುಮಾರ್ ಮತ್ತು ಪ್ರಸನ್ನ ಅವರದ್ದು ಪ್ರಮುಖ ಪಾತ್ರಗಳು. ಇಬ್ಬರು ಉತ್ತಮ ಸಾಥ್ ಕೊಟ್ಟಿದ್ದಾರೆ. ಸುಮನ್, ಸಹಾಸಿನಿ, ಸುಧಾರಣಿ, ವೈಭವ್ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಕ್ಯಾರೆಕ್ಟರ್ ಗೆ ಸೂಕ್ತ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕರ ಕೆಲಸ ಹೇಗಿದೆ
ಕನ್ನಡದಲ್ಲಿ ‘ವಿಸ್ಮಯ’ ಹಾಗೂ ತಮಿಳಿನಲ್ಲಿ ‘ನಿಭುವನ್’ ಹೆಸರಿನಲ್ಲಿ ತೆರೆಕಂಡಿರುವ ಈ ಚಿತ್ರ ಪಕ್ಕಾ ಥ್ರಿಲ್ಲಿಂಗ್ ಮತ್ತು ಸಸ್ಪೆನ್ಸ್ ಸಿನಿಮಾ. ಹೀಗಾಗಿ, ಪ್ರೇಕ್ಷಕರನ್ನ ಕೊನೆವರೆಗೂ ಹಿಡಿದಿಡುವ ಕೆಲಸವನ್ನ ನಿರ್ದೇಶಕ ಅರುಣ್ ವೈದ್ಯನಾಥನ್ ಚೆನ್ನಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾ ಹೇಗಿದೆ
ಅರವಿಂದ್ ಕೃಷ್ಣ ಅವರ ಛಾಯಾಗ್ರಹಣ ಹಾಗೂ ಎಸ್.ನವೀನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೊರಕವಾಗಿದೆ. ಆದ್ರೆ, ಹಾಡುಗಳು ಯಾವುದು ಕಿವಿ ಮುಟ್ಟುವುದಿಲ್ಲ. ಕನ್ನಡ ಹಾಗೂ ತಮಿಳಿನಲ್ಲಿ ಸಿನಿಮಾ ತಯಾರು ಮಾಡಿರುವುದರಿಂದ ಲೊಕೇಶನ್ ಹಾಗೂ ವಾಹನಗಳ ನಂಬರ್ ಪ್ಲೇಟ್ ಗಳಲ್ಲಿ ಕಂಟ್ಯೂನಿಟಿ ಸಮಸ್ಯೆ ಕಂಡುಬರುತ್ತೆ.

ಅರುಷಿ ಕೊಲೆ ಪ್ರಕರಣ ನೆನಪಿಸುವ ಕಥೆ
2008 ಮೇ 16ರಂದು 14ರ ಹರೆಯದ ಆರುಷಿ ಮತ್ತು ಹೇಮರಾಜ್ ಜೋಡಿ ನೋಯ್ಡಾದಲ್ಲಿ ನಿಗೂಢವಾಗಿ ಕೊಲೆಯಾಗಿದ್ದರು. ಈ ಪ್ರಕರಣದಲ್ಲಿ ಅರುಷಿ ತಂದೆ-ತಾಯಿಯೇ ಕೊಲೆ ಮಾಡಿದ್ದಾರೆ ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಕಥೆ ವಿಸ್ಮಯ ಚಿತ್ರದಲ್ಲಿ ನೆನಪಾಗುತ್ತೆ

ಕೊನೆಯ ಮಾತು
ಅರ್ಜುನ್ ಸರ್ಜಾ ಅವರ 150ನೇ ಚಿತ್ರ ನಿರಾಸೆ ಮಾಡಲ್ಲ. ಚಿತ್ರದ ಕೊನೆವರೆಗೂ ಕುತೂಹಲದಿಂದ ನೋಡಬಹುದು. ಇದೊಂದು ಸಸ್ಪೆನ್ಸ್ ಥ್ರಿಲ್ಲಂಗ್ ಸಿನಿಮಾವಾಗಿರುವುದರಿಂದ ಬೇರೆ ಏನೂ ನಿರೀಕ್ಷೆ ಮಾಡುವಂತಿಲ್ಲ. ಯಾವುದೇ ಅಸಡ್ಯೆ ಇಲ್ಲದೆ ಸಿನಿಮಾ ನೋಡಬಹುದು.