ದುನಿಯಾ ವಿಜಯ್ ಅಭಿನಯದ ‘ಮಾಸ್ತಿ ಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ‘ಮಾಸ್ತಿ ಗುಡಿ’ ಚಿತ್ರಕ್ಕೆ ನಿರೀಕ್ಷಿಸಿದಂತೆ ಬಿಗ್ ಓಪನ್ನಿಂಗ್ ಸಿಕ್ಕಿದೆ. Maasthi Gudi (U/A): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ! ವನ್ಯ ಸಂಪತ್ತನ್ನು ರಕ್ಷಿಸಲು ಇಡೀ ಜೀವನವನ್ನೇ ಮುಡಿಪಾಗಿಡುವ ‘ಮಾಸ್ತಿ’ ಪಾತ್ರದಲ್ಲಿ ನಟ ದುನಿಯಾ ವಿಜಯ್ ಘರ್ಜಿಸಿದ್ದಾರೆ. ಯುವಕನಿಂದ ಹಿಡಿದು ಮುದುಕನಾಗುವವರೆಗೂ ಅರಣ್ಯ ಸಂರಕ್ಷಣೆ ಮಾಡುವ ಹೊಣೆ ಹೊತ್ತ ‘ಮಾಸ್ತಿ’ ಮನುಷ್ಯ ರೂಪದ ಮೃಗಗಳನ್ನ ಬಗ್ಗುಬಡಿಯುತ್ತಾನೆ. ಅಲ್ಲಿಗೆ, ‘ಮಾಸ್ತಿ ಗುಡಿ’ ಸಿನಿಮಾ ಮುಗೀತು ಅಂತ ಅಂದುಕೊಂಡರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ, ‘ಮಾಸ್ತಿ ಗುಡಿ-2’ ಬರಲಿದೆ