ನಟಿ ಸಂಜನಾ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ‘ದಂಡುಪಾಳ್ಯ 2’ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಸಂಜನಾ ಮತ್ತೆ ಈಗ ಸುದ್ದಿ ಮಾಡುತ್ತಿದ್ದಾರೆ.

‘ದಂಡುಪಾಳ್ಯ 2’ ಸಿನಿಮಾ ಇಂದು(ಜುಲೈ14ಕ್ಕೆ) ರಾಜ್ಯಾದ್ಯಂತ ರಿಲೀಸ್ ಆಗಿದೆ. ಆದರೆ ಸಂಜನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ತಪ್ಪಾಗಿ ಹಾಕಿದ್ದಾರೆ. ‘ದಂಡುಪಾಳ್ಯ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು ಚಿತ್ರ ಜುಲೈ 21ಕ್ಕೆ ರಿಲೀಸ್ ಅಂತ ಬರೆದುಕೊಂಡಿದ್ದಾರೆ.

ಸಂಜನಾ ಅವರ ಈ ವರ್ತನೆಗೆ ಅನೇಕರು ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ. ಸಿನಿಮಾ ಮುಂದೂಡಿದ್ದಾರೆ ಅಂತ ಸುಳ್ಳು ಹೇಳಬೇಡಿ ಅಂತ ಅನೇಕ ಅಭಿಮಾನಿಗಳು ಕಮೆಂಟ್ ಹಾಕುತ್ತಿದ್ದಾರೆ. ಸಂಜನಾ ಇದನ್ನು ತಿಳಿದು ಮಾಡಿದ್ರಾ..? ಇಲ್ಲ ತಿಳಿಯದೇ ಮಾಡಿದ್ರಾ..? ಗೊತ್ತಿಲ್ಲ. ಆದರೆ ಈ ವಿಷಯದಲ್ಲಿ ಕೆಲ ಅಭಿಮಾನಿಗಳು ಕೋಪಗೊಂಡಿರುವುದಂತು ನಿಜ.