ಬಿಗ್‍ಬಾಸ್ ಕಾರ್ಯಕ್ರಮದ ನಿನ್ನೆಯ ಸಂಚಿಕೆಯಲ್ಲಿ ನಟರಾದ ಶಿವರಾಜ್‍ಕುಮಾರ್, ಸುದೀಪ್ ಮತ್ತು ನಿದೇರ್ಶಕ ಪ್ರೇಮ್ ಒಟ್ಟಿಗೆ ಕೆಲ ಕಾಲ ಹರಟಿದರು.

ಬಿಗ್‍ಬಾಸ್ ವೇದಿಕೆಯಲ್ಲಿ ಪ್ರೇಮ್ ಕಾಲೆಳೆದ್ರು ಶಿವಣ್ಣ, ಸುದೀಪ್

ಈ ವೇಳೆ ಸುದೀಪ್ ಹಾಗೂ ಶಿವಣ್ಣ ಪ್ರೇಮ್ ಅವರನ್ನು ಹಾಸ್ಯ ಮಾಡುತ್ತಾ ಕಾಲೆಳೆದರು.
ಪ್ರೇಮ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟ ಸುದೀಪ್ ಮತ್ತು ಶಿವರಾಜ್‍ಕುಮಾರ್ ಒಟ್ಟಿಗೆ ಅಭಿನಯಿಸುವ ಬಗ್ಗೆ ಪ್ರೇಮ್ ಮಾತನಾಡಿದರು. ಈ ಬಗ್ಗೆ ಸುದೀಪ್ ಮತ್ತು ಶಿವಣ್ಣ ವೇದಿಕೆಯ ಮತ್ತೊಂದು ಮೂಲೆಗೆ ಹೋಗಿ ರಹಸ್ಯವಾಗಿ ಮಾತನಾಡಿ ಬಂದು ಸಂಭಾವನೆ ಎಷ್ಟು ಕೊಡುತ್ತೀರಾ? ಚಿತ್ರದಲ್ಲಿ ಎಷ್ಟು ನಾಯಕಿಯರು ಇರುತ್ತಾರೆ. ಒಬ್ಬರೇ ನಾಯಕಿಯಾದರೆ ನಾವು ಈ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಎಂದೆಲ್ಲಾ ಹಾಸ್ಯ ಮಾಡಿದರು.
ದಿಗ್ಗಜರಾದ ಸುದೀಪ್ ಮತ್ತು ಶಿವಣ್ಣ, ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂಬ ವಿಷಯವನ್ನು ಅವರೇ ಬಿಗ್‍ಬಾಸ್ ವೇದಿಕೆಯಲ್ಲಿ ಖಚಿತಪಡಿಸಿದ್ದಾರೆ.