80 ರ ದಶಕದ ಕಾಲೇಜು ದಿನಗಳನ್ನು ನೆನಪಿಸುವ ಅದ್ಭುತ ಪ್ರೇಮಕಥೆಯ ‘ನೂರೊಂದು ನೆನಪು’ ಸಿನಿಮಾ ತೆರೆಕಂಡಿದ್ದು, ಮೊದಲ ದಿನ ಚಿತ್ರನೋಡಿದ ಪ್ರೇಕ್ಷಕರು ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ.

ಕಳೆದುಕೊಂಡ ಪ್ರೀತಿ ಮರಳಿ ಸಿಗುವ ಅವಕಾಶವಿದ್ದಾಗ ಅದನ್ನು ಪಡೆದುಕೊಳ್ಳಲು ಹೋರಾಡುವುದಿಲ್ಲ. ಪ್ರೀತಿ ನಿಜವಾಗಿದ್ದರೆ ಖಂಡಿತ ಸಿಕ್ಕೇ ಸಿಗುತ್ತದೆ. ಅದಕ್ಕೆ ತಾಳ್ಮೆಯೊಂದೇ ಮುಖ್ಯ ಎಂಬುದನ್ನು ನಿಧಾನವಾಗಿಯಾದರೂ ಸುಂದರವಾಗಿ ‘ನೂರೊಂದು ನೆನಪು’ ಚಿತ್ರದ ಮೂಲಕ ನಿರ್ದೇಶಕ ಕುಮಾರೇಶ್ ಹೇಳಿದ್ದಾರೆ. ಚೊಚ್ಚಲ ನಿರ್ದೇಶಕರ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಂತೆಯೇ ನಮ್ಮ ವಿಮರ್ಶಕರಿಗೂ ಇಷ್ಟವಾಗಿದ್ಯಾ? ಅದಕ್ಕೆ ಉತ್ತರ ಇಲ್ಲಿದೆ

ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ ‘ನೂರೊಂದು ನೆನಪು’ ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

ನಿಧಾನವಾಗಿ ಕಾಡುವ ನೆನಪು- ವಿಜಯ ಕರ್ನಾಟಕ

ವಿಭಿನ್ನ ಪ್ರೇಮ ಕತೆಯನ್ನು ನಿಧಾನವಾಗಿ, ಸಾಧ್ಯವಾದಷ್ಟು ಸುಂದರವಾಗಿ ಚೊಚ್ಚಲ ಚಿತ್ರದಲ್ಲೇ ಹೇಳಿ ಯಶಸ್ವಿ ಆಗಿದ್ದಾರೆ ನಿರ್ದೇಶಕ ಕುಮಾರೇಶ್. 80ರ ದಶಕದ ಕತೆಗೆ ಆ ಕಾಲಘಟ್ಟಕ್ಕೆ ಅನುಗುಣವಾಗಿ ಎಲ್ಲವನ್ನೂ ಸೃಷ್ಟಿಸಿದ್ದು ನಿರ್ದೇಶಕರ ಸೃಜನಶೀಲತೆಗೆ ಹಿಡಿದ ಕನ್ನಡಿ. ಪಾತ್ರಗಳ ಆಯ್ಕೆಯಲ್ಲೂ ಅವರು ಗೆದ್ದಿದ್ದಾರೆ. ಸಂಭಾಷಣೆಯಲ್ಲಿ ಗಟ್ಟಿತನದ ಕೊರತೆ ಇದೆ. ಕತೆಯ ಓಟಕ್ಕೆ ತುಸು ಚುರುಕು ಬೇಕಿತ್ತು. ಚೇತನ್ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಎಸ್‌.ಕೆ.ರಾವ್ ಕ್ಯಾಮೆರಾ 80ರ ದಶಕದ ಕತೆಗೆ ಹೊಂದಿಕೆಯಾಗುವಂತೆಯೇ ಸನ್ನಿವೇಶಗಳನ್ನು ಸೆರೆ ಹಿಡಿದಿದೆ. ಗಗನ್ ಬದೇರಿಯಾ ಸಂಗೀತ ತುಸು ಸಪ್ಪೆ ಅನಿಸಿದರೂ ಒಂದು ಹಾಡು ಇಂಪಾಗಿದೆ. ಮನೆಮಂದಿಯಲ್ಲ ನೋಡಬಹುದಾದ ಪ್ರೇಮಚಿತ್ರವಿದು.

ನಿಧಾನವೇ ಪ್ರಧಾನ; ಪ್ರಯಾಸದ ಪ್ರಯಾಣ- ಪ್ರಜಾವಾಣಿ

ಯಾವುದೇ ರಾಗ-ದ್ವೇಷ, ಭಾವೋದ್ವೇಗವಿಲ್ಲದೆ ಕಥೆ ಹೇಳಬೇಕು ಎಂದು ನಿರ್ದೇಶಕರು ಅಂದುಕೊಂಡಂತಿದೆ. ಆದ್ದರಿಂದ ನಿರೂಪಣೆ ಸಪ್ಪೆಯಾಗಿ ಸಾಗಿದೆ. ದೃಶ್ಯಾವಳಿಗಳು ನಿಧಾನ ಗತಿಯಲ್ಲಿ ಓಡುತ್ತಿದ್ದರೂ ನೋಡುಗನ ಮನದಾಳದಲ್ಲಿ ಯಾವ ಭಾವಗಳೂ ಮೂಡುವುದಿಲ್ಲ. ನಿರ್ದೇಶಕರು ಸಿನಿಮಾದ ಸಾಧ್ಯತೆಗಳನ್ನು ಕೈಚೆಲ್ಲಿದ್ದಾರೆ. ಕಣ್ಮುಚ್ಚಿ ಕೂತು ರೇಡಿಯೋದಲ್ಲಿ ಬರುವ ಕಥೆ ಕೇಳುವಷ್ಟೇ ಅನಾಯಾಸವಾಗಿ ಸಿನಿಮಾವನ್ನೂ ಕೇಳಬಹುದು. ಸಂಗೀತ ಮತ್ತು ಛಾಯಾಗ್ರಹಣ ಗಮನ ಸೆಳೆಯುತ್ತದೆ. ನಟನೆಯಲ್ಲಿ ಎಲ್ಲರೂ ಖುಷಿ ನೀಡುತ್ತಾರೆ. ನಾಯಕನಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಉಳಿದ ಪಾತ್ರಗಳನ್ನು ನಗಣ್ಯ ಮಾಡುವ ಚಾಳಿ ಇಲ್ಲಿಲ್ಲ. ಎಲ್ಲ ಮುಖ್ಯ ಪಾತ್ರಗಳಿಗೆ ಸಮಾನ ಅವಕಾಶ ನೀಡಲಾಗಿದೆ – ಗಣೇಶ ವೈದ್ಯ

ನೆನಪುಗಳ ದುನಿಯಾಗೆ ನೂರೊಂದು ದಾರಿ- ಕನ್ನಡಪ್ರಭ

ನಟರ ಉಡುಗೆತೊಡುಗೆಗಳಲ್ಲಿ 80 ರ ದಶಕದ ವಿದ್ಯಾರ್ಥಿಗಳ ನಮೂನೆಯನ್ನು ಸೆರೆಹಿಡಿದಿದ್ದರೂ, ಆ ಕಾಲವನ್ನು ಸೃಷ್ಟಿಸಲು, ಘಟನೆಗಳನ್ನು ಹೆಣೆಯಲು ನಿರ್ದೇಶಕ ಸೋತಿದ್ದಾರೆ. ಹಾಗೆ ಸ್ವಲ್ಪ ನಿರಾಸೆ ಮೂಡಿಸಿದ್ದಾರೆ. ಕಾಲೇಜು ಲವಲವಿಕೆಯನ್ನು ಪರಿಣಾಮಕಾರಿಯಾಗಿ, ಸ್ವಾಭಾವಿಕವಾಗಿ ಚಿತ್ರಿಸಲು ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಗೆಳೆತನದ ಘಟನೆಗಳು ಮತ್ತು ದೃಶ್ಯಗಳು ಕೂಡ ಅತಿ ಸಾಮಾನ್ಯ ಎಂಬಂತೆ ಮೂಡಿವೆ. ತಾಂತ್ರಿಕವಾಗಿ ಒಂದಷ್ಟು ಭರವಸೆ ಮೂಡಿಸಿದೆ. ಸಂಭಾಷಣೆ ತೀವ್ರ ಭೋಧನೆಯ ಸ್ವರೂಪ ತಳೆಯುವುದು, ಬಹಳ ನಿಧಾನವಾಗಿ ಚಲಿಸುವ ಆಕ್ಷನ್ ದೃಶ್ಯಗಳು, ಕೆಲವೊಮ್ಮೆ ಸರಾಗತನ ಇಲ್ಲದ ಸಂಕಲನ ಹೀಗೆ ಇನ್ನೊಂದಷ್ಟು ಅಡಚಣೆಗಳು ಕೂಡ ಸಿನೆಮಾದಲ್ಲಿ ಸೇರಿವೆ.

Noorondu Nenapu Movie Review: The Time of India

In the film soul of the narrative has something that entertains, the pace of the narrative proves to be a tad slow at times, making the viewers restless at those moments. One of the biggest draws for the film is the good looking cast, as well as their styling. One can’t but appreciate the hard work that has gone in behind this. The film also has some catchy tunes and good background music. There are a few things that one can nitpick, like some factual errors, where the film set in 1980 has references to much later released films like Bandana and Hosa Belaku. But, these can be overlooked. The story has some good moments and the hard work behind the screen shows. The cast does a good job, especially Chetan, although his American accent slips in at times. Meghana Raj and newbie Rajvardhan also do a good job.