‘ಡಿ ಬಾಸ್’ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಎಂ.ಎಸ್.ಧೋನಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಇವರಿಬ್ಬರಿಗೂ ಒಂದು ಲಿಂಕ್ ಇದೆ. ಅದೇನಪ್ಪಾ ಆ ಲಿಂಕ್ ಎಂದು ನೀವು ಯೋಚನೆ ಮಾಡುತ್ತಿರಬಹುದು. ಆದರೆ ದರ್ಶನ್ ಮತ್ತು ಧೋನಿ ನಡುವೆ ಒಂದು ಸಂಬಂಧ ಖಂಡಿತ ಇದೆ.

ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿ ಟ್ರೆಂಡ್ ಸೃಷ್ಟಿ ಮಾಡಿದೆ. ಇನ್ನು ಈ ಟೀಸರ್ ನ ಸರಿಯಾಗಿ ಗಮನಿಸಿದರೆ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಕ್ಕಿ ಬಿಡುತ್ತದೆ. ಚಿತ್ರದಲ್ಲಿ ದರ್ಶನ್ ರಗ್ಬಿ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದು ಅವರ ಜರ್ಸಿ ಸಂಖ್ಯೆ ‘7’ ಆಗಿದೆ.

ಕ್ರಿಕೆಟ್ ಪ್ರಿಯರಿಗೆ ‘7’ ಸಂಖ್ಯೆ ನೋಡಿದ ತಕ್ಷಣ ಎಂ.ಎಸ್.ಧೋನಿ ನೆನಪಾಗುತ್ತಾರೆ. ಯಾಕಂದ್ರೆ ಧೋನಿ ಅವರ ಜರ್ಸಿ ಸಂಖ್ಯೆ ಕೂಡ ‘7’. ಈ ‘7’ ಸಂಖ್ಯೆಯ ಜರ್ಸಿಯನ್ನು ತೊಟ್ಟು ಧೋನಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟರು. ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ ಈ ಸಂಖ್ಯೆ ಈಗ ದರ್ಶನ್ ಮೂಲಕ ಮತ್ತಷ್ಟು ಜನಪ್ರಿಯವಾಗುತ್ತಿದೆ.