ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ ‘ತಾರಕ್’ಗೆ ಉತ್ತಮ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ.

‘ದಾಸ’ ದರ್ಶನ್ ಗೆ ಹೊಸ ಇಮೇಜ್ ನೀಡಿರುವ ‘ತಾರಕ್’ ‘ಸೂಪರ್ರೋ ಸೂಪರ್’ ಅಂತ ‘ಒಳ್ಳೆ ಹುಡುಗ’ ಪ್ರಥಮ್ ಕೂಡ ಹಾಡಿ ಹೊಗಳಿದ್ದಾರೆ.

”ಎರಡನೇ ಬಾರಿ ‘ತಾರಕ್’ ವೀಕ್ಷಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನಗೆ ಸಖತ್ ಖುಷಿ ಕೊಟ್ಟಂತಹ ಸಿನಿಮಾ. ಕುರಿ ಪ್ರತಾಪ್ ಬಹಳ ಇಷ್ಟ ಆಗೋದ್ರು. ನಿಜವಾಗಿಯೂ ನನ್ನ ಮನಸ್ಸಿಗೆ ತುಂಬಾ ಹಿಡಿಸಿದ ಸಿನಿಮಾ, ನಗು ಹಾಗೂ ಭಾವನಾತ್ಮಕವಾಗಿ ಕಾಡುವ ಸಿನಿಮಾ. ದರ್ಶನ್ ತೂಗುದೀಪ ರವರು, ಪ್ರಕಾಶ್ ಸರ್, ಶಾನ್ವಿ, ಶ್ರುತಿ ಹರಿಹರನ್ ಜೊತೆಗೆ ನನ್ನ ಪ್ರೀತಿಯ ಸಹೋದರ ಮಿತ್ರರಾದ ಕುರಿ ಪ್ರತಾಪ್ ಸೂಪರ್ರೋ ಸೂಪರ್. ಮಿಸ್ ಮಾಡದೆ ನೋಡಿ ತಾರಕೋತ್ಸವವನ್ನು” ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.

 ಅಂದ್ಹಾಗೆ, ನಟ ದರ್ಶನ್ ಅಭಿನಯದ 49ನೇ ಸಿನಿಮಾ ‘ತಾರಕ್’. ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಕಥೆ ಹೊಂದಿರುವ ‘ತಾರಕ್’ ಚಿತ್ರಕ್ಕೆ ‘ಮಿಲನ’ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ.