ನಂದಕಿಶೋರ್ ನಿರ್ದೇಶನದ ‘ಟೈಗರ್’ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಕ್ಷನ್ ಡ್ರಾಮಾ ಆಗಿರುವ ‘ಟೈಗರ್’ ಚಿತ್ರವನ್ನು ನೋಡಿ ಪ್ರೇಕ್ಷಕರು ಬಹಳನೇ ಮೆಚ್ಚಿಕೊಂಡಿದ್ದಾರೆ. ಪ್ರದೀಪ್ ಫೈಟ್, ಡ್ಯಾನ್ಸ್ ಆಕ್ಷನ್ ಪ್ರಿಯರ ಮನ ಗೆದ್ದಿದೆ.

ಕನ್ನಡ ಕಲಾಭಿಮಾನಿಗಳ ಮನಸ್ಸು ಗೆದ್ದ ಟೈಗರ್ ವಿಮರ್ಶಕರಿಗೆ ಇಷ್ಟವಾಯಿತಾ? ಪ್ರದೀಪ್ ನಟನೆ, ನಂದಕಿಶೋರ್ ನಿರ್ದೇಶನಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ‘ಟೈಗರ್’ ಸಿನಿಮಾವನ್ನು ನೋಡಿ ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಕೊಟ್ಟಿರುವ ವಿಮರ್ಶೆ ಇಲ್ಲಿದೆ ನೋಡಿ…..ಮುಂದಿದೆ ಓದಿ…

ರಂಜಿಸುವ ಹುಲಿ ಗರ್ಜನೆ: ವಿಜಯ ಕರ್ನಾಟಕ

ಪ್ರದೀಪ್‌ ಅವರನ್ನು ಮಾಸ್‌ ಹೀರೋ ಮಾಡಬೇಕೆಂಬ ಧಾವಂತದಲ್ಲಿ ಈ ಹಿಂದೆ ಕೆಲವು ಸೂಪರ್‌ ಹಿಟ್‌ ಚಿತ್ರ ನೀಡಿದ ನಿರ್ದೇಶಕ ನಂದಕಿಶೋರ್ ಮಾಸ್‌ನಲ್ಲಿ ಗೆದ್ದು ಕತೆಯಲ್ಲಿ ಸ್ವಲ್ಪ ಎಡವಿದ್ದಾರೆ. ನಾಯಕನಷ್ಟೇ ನಾಯಕನ ತಂದೆಗೂ ಮನ್ನಣೆ ನೀಡ ಹೊರಟ್ಟಿದ್ದು ಕತೆಯ ಕಸುವನ್ನು ಕಸಿದುಕೊಳ್ಳುತ್ತದೆಯಾದರೂ ಹಾಸ್ಯದ ಹೊಳಪು ಚಿತ್ರವನ್ನು ಬೀಳದಂತೆ ಕಾಪಾಡಿದೆ” – ವಿಜಯ ಕರ್ನಾಟಕ

ಖುಷಿ ಕೊಡುವ ಕಳ್ಳ-ಪೊಲೀಸ್ ಆಟ : ವಿಜಯವಾಣಿ

”ಹಾಗೆ ನೋಡಿದರೆ ಇಲ್ಲಿ ಇಬ್ಬರು ‘ಟೈಗರ್’ ಗಳಿರುತ್ತಾರೆ. ಮೊದಲರ್ಧದಲ್ಲಿ ಇನ್ನೇನು ಟೈಗರ್ ಅಶೋಕ್ (ಪ್ರದೀಪ್) ಕಥೆ ಮುಗೀತು ಎನ್ನುವಾಗ ಟೈಗರ್ ಆಗಿ ಕೆ.ಶಿವರಾಮ್ ಎರಡನೇ ಹಿರೋ ಥರ ಮಿಂಚುತ್ತಾರೆ. ಆದರೆ ಹುಲಿಯ ಗತ್ತು – ಗರೈತ್ತು ಅವರ ನಟನೆಯಲ್ಲಿ ಅಷ್ಟಾಗಿ ಕಾಣಿಸುವಿದಿಲ್ಲ. ಪೊಲೀಸರು ರಾಜಕಾರಣಿ ಭೂಗತ ಪಾತಕಿಗಳ ಮಧ್ಯೆ ನಡೆಯುವ ಕಳ್ಳ ಪೊಲೀಸ್ ಆಟ ಅಲ್ಲಲ್ಲಿ ಖುಷಿ ಕೊಡುವುದಂತೂ ನಿಜ” – ವಿಜಯವಾಣಿ

ಹುಲುಮಾನವರ ಹುಲಿಯಾಟ : ಉದಯವಾಣಿ

”ಚಿತ್ರದ ಅವಧಿ ಕಡಿಮೆಯಾಗಿ, ಇನ್ನಷ್ಟು ಚುರುಕಾಗಿದ್ದರೆ, ಇನ್ನಷ್ಟು ಕಳೆಗಟ್ಟುವ ಸಾಧ್ಯತೆ ಇತ್ತು. ತಮ್ಮ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಪ್ರದೀಪ್‌ ಸಾಕಷ್ಟು ಮಾಗಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಹೆಚ್ಚು ಗಮನಸೆಳೆಯುತ್ತಾರೆ. ಬಹಳ ವರ್ಷಗಳ ನಂತರ ನಟಿಸಿರುವ ಶಿವರಾಮ್ ಸಹ ಕೆಲವು ಕಡೆ ಇಷ್ಟವಾಗುತ್ತಾರೆ. ಆದರೆ, ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನಸೆಳೆಯುವುದೆಂದರೆ ಅದು ರವಿಶಂಕರ್‌ ಮತ್ತು ದೀಪಕ್‌ ಶೆಟ್ಟಿ” – ಉದಯವಾಣಿ

TIGER Review – Times of India

”Nanda Kishora has proven that he is capable of making good commercial cinema thus far. With Tiger came the onus of reintroducing Pradeep with a mass makeover, which Nanda has tried to do leaving no commercial formula untouched. This film can interest those who like the old school brand of commercial cinema. Though, take enough snacks along as the film’s length is a tad longer than it should have ideally been”- Times of India