ಎಲ್ಲ ಅಂದುಕೊಂಡಂತೆ ಆಗಿದ್ದರೇ ಮೇ 19ಕ್ಕೆ ಸ್ಯಾಂಡಲ್ ವುಡ್ ನಲ್ಲಿ ಡಬಲ್ ಧಮಾಕ ಆಗಬೇಕಿತ್ತು. ಆದ್ರೀಗ, ಚಿತ್ರಪ್ರೇಮಿಗಳಿಗೆ ಸ್ವಲ್ಪ ನಿರಾಸೆ ಆಗಿದೆ. ಅದಕ್ಕೆ ಕಾರಣ ‘ನೂರೊಂದು ನೆನಪು’.

ಹೌದು, ಮೇ 19 ರಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರ ಬಿಡುಗಡೆಯಾಗುತ್ತಿದೆ. ಅದೇ ದಿನ ‘ಆ ದಿನಗಳು’ ಚೇತನ್ ಹಾಗೂ ನಟಿ ಮೇಘನಾ ರಾಜ್ ಅಭಿನಯದ ‘ನೂರೊಂದು ನೆನಪು’ ಚಿತ್ರವೂ ತೆರೆಕಾಣಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ‘ನೂರೊಂದು ನೆನಪು’ ಮುಂದೋಗಿದೆ.

‘ಆ ದಿನಗಳು’ ಖ್ಯಾತಿಯ ನಟ ಚೇತನ್ ಬಹುದಿನಗಳ ನಂತರ ಅಭಿನಯಿಸಿರುವ ಚಿತ್ರ ‘ನೂರೊಂದು ನೆನಪು’. ಫಸ್ಟ್ ಲುಕ್ ಪೋಸ್ಟರ್ ಹಾಗೂ ಟ್ರೈಲರ್ ನಿಂದ ಕುತೂಹಲ ಮೂಡಿಸಿರುವ ಈ ಚಿತ್ರ ಕೊನೆಗೂ ತೆರೆಮೇಲೆ ಬರುವುದಕ್ಕೆ ರೆಡಿಯಾಗಿದೆ. ಮೇ 19 ರಂದು ರಾಜ್ಯಾದ್ಯಂತ ‘ನೂರೊಂದು ನೆನಪು’ ತೆರೆಕಾಣಲಿದೆ.

ಅಂದ್ಹಾಗೆ, ‘ನೂರೊಂದು ನೆನಪು’ ಮರಾಠಿಯ ‘ದುನಿಯಾ ದಾರಿ’ ಕಾದಂಬರಿ ಆಧಾರಿತ ಚಿತ್ರ. ಖ್ಯಾತ ಬರಹಗಾರ ಸುಹಾಸ್ ಶಿರ್ವ್ಕಾರ್ ಬರೆದಿರುವ ಮರಾಠಿ ಕಥೆಯನ್ನ ತಮ್ಮ ನೆಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡಲಾಗಿದೆ. ಈ ಚಿತ್ರ ಸಂಪೂಣವಾಗಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿರುವುದು ವಿಶೇಷ. 80 ರ ದಶಕದ ಕಥಾಹಂದರವನ್ನ ಈ ಚಿತ್ರ ಹೊಂದಿದ್ದು, ಚಿತ್ರದ ಬಹುತೇಕ ಚಿತ್ರೀಕರಣವನ್ನ ಬೆಳಗಾವಿಯಲ್ಲಿ ಶೂಟ್ ಮಾಡಲಾಗಿದೆ.