ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ‘ದಿ ವಿಲನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಸದ್ಯ ಲಂಡನ್ ನಲ್ಲಿ ‘ದಿ ವಿಲನ್’ ಚಿತ್ರತಂಡ ಬೀಡುಬಿಟ್ಟಿದೆ. ಕಿಚ್ಚ ಸುದೀಪ್ ಹಾಗೂ ನಟಿ ಆಮಿ ಜಾಕ್ಸನ್ ರವರ ಭಾಗದ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿದೆ.

ಡಿಫರೆಂಟ್ ಸ್ಟೈಲ್ ನಲ್ಲಿ ‘ಅಭಿನಯ ಚಕ್ರವರ್ತಿ’ ಸುದೀಪ್ ಹಾಗೂ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ಚಿತ್ರಗಳು…

‘ದಿ ವಿಲನ್’ ಚಿತ್ರದ ಶೂಟಿಂಗ್ ಫುಲ್ ಸ್ಪೀಡ್ ನಲ್ಲಿ ನಡೆಯುತ್ತಿರುವುದರಿಂದ, ನಿರ್ದೇಶಕ ಪ್ರೇಮ್ ಸಖತ್ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಆಮಿ ಜಾಕ್ಸನ್ ಕೂಡ ಹಮ್ಮು-ಬಿಮ್ಮು ಇಲ್ಲದೇ ‘ದಿ ವಿಲನ್’ ಸೆಟ್ ನಲ್ಲಿ ನಿರ್ದೇಶಕ ಪ್ರೇಮ್ ಹೇಳಿದಂತೆ ಅಭಿನಯಿಸುತ್ತಿದ್ದಾರೆ.

ಸದ್ಯದಲ್ಲಿಯೇ ನಟ ಶಿವರಾಜ್ ಕುಮಾರ್ ಕೂಡ ‘ದಿ ವಿಲನ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.