ಪುನೀತ್ ರಾಜ್ ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾ ಕನ್ನಡಿಗರ ಮನ ಗೆದ್ದಿದೆ. ನೂರು ದಿನಗಳನ್ನು ಕಂಪ್ಲೀಟ್ ಮಾಡಿರುವ ‘ರಾಜಕುಮಾರ’ ಸಿನಿಮಾ ಗಾಂಧಿನಗರದಲ್ಲಿ ತನ್ನ ವಿಜಯ ಯಾತ್ರೆಯನ್ನು ಮುಗಿಸಿದೆ.

‘ರಾಜಕುಮಾರ’ ಸಿನಿಮಾ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿತ್ತು. ಇಂದು ಆ ಚಿತ್ರಮಂದಿರದಲ್ಲಿ ‘ದಂಡುಪಾಳ್ಯ 2’ ಸಿನಿಮಾ ರಿಲೀಸ್ ಆಗಿದೆ. ಇದರಿಂದ ಗಾಂಧಿನಗರದ ಚಿತ್ರಮಂದಿರದಲ್ಲಿ ರಾಜಕುಮಾರ ತನ್ನ ಪ್ರದರ್ಶನವನ್ನು ಅಂತ್ಯಗೊಳಿಸಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ ‘ರಾಜಕುಮಾರ’ ಚಿತ್ರ ಜೂನ್ 30ಕ್ಕೆ ಸರಿಯಾಗಿ 100 ದಿನಗಳನ್ನು ಪೂರೈಸಿತ್ತು.