ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಪಟಾಕಿ’ ಚಿತ್ರ ರಾಜ್ಯಾದ್ಯಂತ ತೆರೆಕಂಡು, ಎಲ್ಲೆಡೆ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿದೆ.

‘ಪಟಾಕಿ’ ಚಿತ್ರದಲ್ಲಿ ನಟ ಗಣೇಶ್ ರವರ ಖಾಕಿ ಖದರ್‌ನಲ್ಲಿನ ಅಭಿನಯ ಮತ್ತು ಕಾಮಿಡಿ ನೋಡಿ ಪ್ರೇಕ್ಷಕರು ದೀಪಾವಳಿ ಹಬ್ಬ ಮಾಡಿದಷ್ಟೇ ಸಂಭ್ರಮ ಪಟ್ಟಿದ್ದಾರೆ. ಇನ್ನೂ ಸಾಯಿ ಕುಮಾರ್, ಸಾಧು ಕೋಕಿಲ ಇವರೆಲ್ಲರ ಹಾಸ್ಯ ಚಟಾಕಿಗೆ ಕನ್ನಡ ಸಿನಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ‘ಪಟಾಕಿ’ ಚಿತ್ರವನ್ನು ಗೋಲ್ಡರ್ ಸ್ಟಾರ್ ಅಭಿಮಾನಿಗಳಂತೆ ಸಿನಿಮಾ ನೋಡಿದ ವಿಮರ್ಶಕರು ಎಂಜಾಯ್ ಮಾಡಿದ್ರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ ‘ಪಟಾಕಿ’ ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

ಮ್ಯಾಜಿಕ್ ಸೌಂಡ್ ಮಾಡಿದ ಪಟಾಕಿ:
ವಿಜಯ ಕರ್ನಾಟಕ ಪೊಲೀಸ್ ಅಧಿಕಾರಿಗಳ ಕಥಾ ಹಂದರ ಚಿತ್ರದಲ್ಲಿ ಪ್ರಾಮಾಣಿಕ, ಭ್ರಷ್ಟ ಅಧಿಕಾರಿಯ ಇರುವಿಕೆ ಸಾಮಾನ್ಯ. ಕೆಲ ಬಾರಿ ಕಾಮಿಡಿಯಾಗಿಯೂ ತೋರಿಸಿದ್ದಿದೆ. ಆದರೆ ‘ಪಟಾಕಿ’ ಚಿತ್ರದಲ್ಲಿ ಇವೆಲ್ಲವೂ ಬೆರೆತಿದ್ದು ಸ್ಪೆಷಲ್ ಅಧಿಕಾರಿಯನ್ನೇ ಕಾಣಬಹುದು. ಆದ್ದರಿಂದ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ಮೊದಲರ್ಧ ಸಖತ್ ಕಚಗುಳಿ, ದ್ವಿತೀಯಾರ್ಧ ಗಂಭೀರವಾಗಿದ್ದು, ಪಟಾಕಿ ಸೌಂಡ್ ಮಾಡಿದೆ. ತೆಲುಗು ‘ಪಟಾಸ್’ ಚಿತ್ರವನ್ನೇ ಯಥಾವತ್ತಾಗಿ ನಕಲು ಮಾಡಿಲ್ಲ. ಗಣೇಶ್ ಮ್ಯಾನರಿಸಂಗೆ ತಕ್ಕಂತೆ ಚಿತ್ರ ಬದಲಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಗಣೇಶ್ ಬೆರಗು ಮೂಡಿಸುತ್ತಾರೆ. ಪಕ್ಕಾ ಮನರಂಜನಾತ್ಮಕ ಸಿನಿಮಾ ಇದ್ದಾಗಿದ್ದು, ಲಾಜಿಕ್ ಗಿಂತ ಮ್ಯಾಜಿಕ್‌ಗೆ ಮಹತ್ವ ನೀಡಿದ್ದಾರೆ ನಿರ್ದೇಶಕರು. ಚಿತ್ರ ನೋಡಿದರೆ ಹೊಟ್ಟೆತುಂಬಾ ನಗಬಹುದು – ಶರಣು ಹುಲ್ಲೂರು

ತುಸು ಸದ್ದು, ತುಸು ವಾಸನೆ:
ಪ್ರಜಾವಾಣಿ ಕೆಟ್ಟವನು ಒಳ್ಳೆಯವನಾಗುವ ಕತೆ ಇಟ್ಟುಕೊಂಡು ಪ್ರೇಕ್ಷಕನ ಚಪ್ಪಾಳೆ ಗಿಟ್ಟಿಸುವಿಕೆ ಸಿನಿಮಾ ಮಾಡುವುದು ಈ ರಂಗದ ಹಳೆಯ ಚಾಳಿ. ಅದರಲ್ಲಿ ವಿಶೇಷವಿಲ್ಲ. ಹಾಗೆಯೇ ‘ಪಟಾಕಿ’ಯಲ್ಲೂ ಅಂತಹ ದಮ್ಮಿಲ್ಲ. ಇಲ್ಲಿ ಪೊಲೀಸ್ ಅಧಿಕಾರಿ ಭ್ರಷ್ಟ ಮಾತ್ರವಲ್ಲದೇ ಅಧಿಕಾರಿ ಎಂಬುದನ್ನೂ ಮರೆತು ಎಳಸಾಗಿ ನಡೆದುಕೊಂಡು ಪ್ರೇಕ್ಷಕರ ಕನಿಕರಕ್ಕೆ ಪಾತ್ರನಾಗುತ್ತಾನೆ. ನಿರ್ದೇಶಕ ಮತ್ತು ನಟನ ಪ್ರಯತ್ನದಿಂದ ಪ್ರೇಕ್ಷಕರ ಬೆನ್ನಿಗೆ ‘ಪಟಾಕಿ’ ಹಚ್ಚುವ ಪ್ರಯತ್ನ ನಡೆದಿದೆ. ಮನರಂಜಿಸುವ ಭರದಲ್ಲಿ ಚಿತ್ರದ ಹದ ಕೆಡಿಸಿದ್ದಷ್ಟೇ ಅಲ್ಲ ನೋಡುಗರ ಕಣ್ಣು ನೋವಿಗೂ ಕಾರಣವಾಗುತ್ತದೆ ಚಿತ್ರ – ಸಂದೀಪ ನಾಯಕ

ಶಬ್ಧ ಮತ್ತು ವಿಧಿ ವಿಪರೀತಗಳ ನಡುವೆ ಢಮ್ ಢಮಾ ಢಮಾರ್:
ಕನ್ನಡಪ್ರಭ ‘ಪಟಾಕಿ’ ನಿಜವಾಗಲೂ ಹೊಡೆದು ಸಂಭ್ರಮಿಸುವಂತದ್ದೇ. ಆದರೆ ಇತ್ತ ಗಂಭೀರ ಥ್ರಿಲ್ಲರ್ ಅಲ್ಲದ, ಅತ್ಯುತ್ತಮ ಹಾಸ್ಯವನ್ನು ಹೊಂದದ, ತಾಜಾತನದ ಕಥೆಯು ಇರದ ಈ ಕಮರ್ಷಿಯಲ್ ಮಸಾಲ ಸಿನಿಮಾಗೆ ಸಮಾಧಾನಚಿತ್ತರನ್ನು ಕೆರಳಿಸಿ ನರಳಿಸುವ ಶಕ್ತಿ ಇದೆ. ಮೊದಲಾರ್ಧ ಪೊಲೀಸ್ ಅಧಿಕಾರಿಯ ಕುಚೇಷ್ಟೆಗಳು ಸಾಕಪ್ಪ ಎನ್ನವಷ್ಟು ಬೇಸರಿಸುತ್ತವೆ. ನಿರ್ದೇಶಕ ಮೊದಲಾರ್ಧ ಪ್ರೇಕ್ಷಕರನ್ನು ಸುಳಿವಿಲ್ಲದ ಸುಳಿಗೆ ಸಿಲುಕಿಸುತ್ತಾರೆ. ದ್ವೀತಿಯಾರ್ಧ ಪ್ರೇಕ್ಷಕನಿಗೆ ನೆಮ್ಮದಿ ತರುವುದಿಲ್ಲ. ತಾಂತ್ರಿಕವಾಗಿಯೂ ಸಿನೆಮಾ ಅಂತಹ ಉತ್ಕೃಷ್ಟತೆಯನ್ನೇನು ಸಾಧಿಸುವುದಿಲ್ಲ. ಅರ್ಜುನ್ ಜನ್ಯ ಸಂಗೀತ ಹಾಡುಗಳು ಯಾವುವು ಮನಸ್ಸಿನಲ್ಲಿ ಉಳಿಯುವುದಿಲ್ಲ. ತುಸು ಹಾಸ್ಯ ಹೊರತುಪಡಿಸಿ, ಪ್ರೇಕ್ಷಕನಿಗೆ ಆಪ್ತವಾಗುವ ಅಂಶ ಹುಡುಕುವುದು ಕಷ್ಟದ ಕೆಲಸ.

Pataki Movie Review:
The Times of India Manju Swaraj has chosen to make the remake of the Telugu hit Pataas with this film. The original was a massy entertainer, which was high on commercial tropes and won audience acclaim. Pataki, too, is a film that does exactly that. It is no realistic tale that wants to deliver a message, instead it unabashedly offers all that one wants in a fun, commercial film. The film, in totality, makes for a decent watch with a good mix of action, comedy and romance. If you like your masala films with that extra tadka, this can entice you. The bonus is that Ganesh entertains as the new massy hero in town.