ಡಬ್ಬಿಂಗ್…..ಕನ್ನಡ ಚಿತ್ರರಂಗ ಒಪ್ಪಿಕೊಳ್ಳಲಾಗದ ಸಂಸ್ಕೃತಿ. ಅದಕ್ಕಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇದೆ. ಈ ಹೋರಾಟದ ಮಧ್ಯೆಯೂ ಡಬ್ಬಿಂಗ್ ಬೇಕು ಎಂಬ ಕೂಗು ಜೋರಾಗಿಯೇ ಕೇಳಿ ಬಂತು. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ‘ಬಾಹುಬಲಿ’. ‘ಬಾಹುಬಲಿ’ ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಲಿ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನವೇ ಶುರು ಮಾಡಿದ್ದರು. ಆದ್ರೆ, ಅದು ಆಗಿರಲಿಲ್ಲ. ಇದೀಗ, ‘ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಕೂಡ ಡಬ್ಬಿಂಗ್ ಬಗ್ಗೆ ಮಾತನಾಡಿದ್ದು, ‘ಬಾಹುಬಲಿ’ ಚಿತ್ರವನ್ನ ಕನ್ನಡದಲ್ಲಿ ಡಬ್ಬಿಂಗ್ ಮಾಡುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.[‘ಕನ್ನಡದಲ್ಲಿ ಬಾಹುಬಲಿ’ಗಾಗಿ ಮತ್ತೆ ಜೋರಾಗಿದೆ ಕೂಗು] ಹಾಗಾದ್ರೆ, ರಾಜಮೌಳಿ ಡಬ್ಬಿಂಗ್ ಬಗ್ಗೆ ಏನು ಹೇಳಿದರು? ಕನ್ನಡದಲ್ಲಿ ‘ಬಾಹುಬಲಿ’ ಡಬ್ ಮಾಡ್ತಾರ? ಮುಂದೆ ಓದಿ…… VIDEO : S S Rajamouli Reaction On Baahubali 3 | ಕಟ್ಟಪ್ಪನ ಮೇಲಿರೋ ಕೋಪಕ್ಕೆ : ‘ಬಾಹುಬಲಿ-1’ ಮರುಪ್ರದರ್ಶನ ರದ್ದು ಮಾಡಿದ್ರು ಕನ್ನಡಿಗರು . 01:40 ಶಿವರಾತ್ರಿಗೆ ಹಬ್ಬಕ್ಕೆ ‘ಬಂಗಾರು ಸನ್ ಆಫ್ ಬಂಗಾರದ ಮನುಷ್ಯ ಆಗಮನ 02:39 ‘ವೀಕೆಂಡ್ ವಿಥ್ ರಮೇಶ್’ ಸೀಸನ್ ೩ ನಲ್ಲಿ ಸಾಧಕರ ಸಮಾಗಮ ಜೋರಾಗಿದೆ . ಬಳ್ಳಾರಿಯಲ್ಲಿ ‘ಬಾಹುಬಲಿ’ ನೋಡಿದ ಮೌಳಿ! ಇತ್ತೀಚೆಗೆ ಬಳ್ಳಾರಿಗೆ ಕುಟುಂಬ ಸಮೇತರಾಗಿ ಆಗಮಿಸಿದ್ದ ನಿರ್ದೇಶಕ ಎಸ್.ಎಸ್ ರಾಜಮೌಳಿ, ನಗರದ ರಾಧಿಕಾ ಚಿತ್ರಮಂದಿರದಲ್ಲಿ ‘ಬಾಹುಬಲಿ-2’ ಚಿತ್ರವನ್ನ ವೀಕ್ಷಿಸಿದರು. ಈ ವೇಳೆ ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.[‘ಬಾಹುಬಲಿ 2’ ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!] ಡಬ್ಬಿಂಗ್ ಮಾಡಿದ್ರೆ ಚೆನ್ನಾಗಿರುತ್ತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಮೌಳಿ ”ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ರೆ ಚೆನ್ನಾಗಿರುತ್ತೆ. ನಮ್ಮ ಕೈಯಲ್ಲಿ ಇಲ್ಲ. ಫಿಲ್ಮ್ ಚೇಂಬರ್ ಮಾಡಬಾರದು ಅಂತ ಹೇಳ್ತಿದ್ದಾರೆ. ಆದ್ರೆ, ಪ್ರೇಕ್ಷಕರು ಮಾಡಿ ಅಂತ ಕೇಳ್ತಿದ್ದಾರೆ. ಇಕ್ಕಟ್ಟಿನ ಪರಿಸ್ಥಿತಿ. ತಕ್ಷಣ ನಾವು ಯಾವ ನಿರ್ಧಾರಕ್ಕೂ ಬರುವುದಕ್ಕೆ ಸಾಧ್ಯವಿಲ್ಲ. ಸೋ, ಮುಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗಬಹುದು”- ಎಸ್.ಎಸ್.ರಾಜಮೌಳಿ, ನಿರ್ದೇಶಕ [‘ಡಬ್ಬಿಂಗ್ ಬರಲಿ ಬಿಡಿ’: ದುನಿಯಾ ಸೂರಿ ಕೊಟ್ಟ ಚಾಲೆಂಜಿಂಗ್ ಉತ್ತರ!] ಅವಕಾಶ ಕೊಟ್ಟರೇ ‘ಬಾಹುಬಲಿ’ ಕನ್ನಡಕ್ಕೆ? ರಾಜಮೌಳಿ ಅವರ ಮಾತುಗಳನ್ನ ಗಮನಿಸಿದ್ರೆ, ಬಾಹುಬಲಿ ಚಿತ್ರವನ್ನ ಕನ್ನಡದಲ್ಲೂ ಡಬ್ಬಿಂಗ್ ಮಾಡುವ ಬಯಕೆ ಇತ್ತು ಅನ್ಸುತ್ತೆ. ಆದ್ರೆ, ಕರ್ನಾಟಕದಲ್ಲಿ ವಿರೋಧವಿರವುದರಿಂದ ಡಬ್ಬಿಂಗ್ ನಿಂದ ಹಿಂದೆ ಸರಿದಿದ್ದಾರೆ ಎಂಬುದು ಸತ್ಯ ಸಂಗತಿ.[ಕನ್ನಡಕ್ಕೆ ಡಬ್ ಆಗಿ ಬಂದೇ ಬಿಡ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್] ಬಹುಭಾಷೆಗಳಲ್ಲಿ ಡಬ್ಬಿಂಗ್ ಆಗಿದೆ ಅಂದ್ಹಾಗೆ, ‘ಬಾಹುಬಲಿ’ ಚಿತ್ರ ತೆಲುಗಿನಲ್ಲಿ ತಯಾರಾಗಿದೆ. ತೆಲುಗಿನ ಈ ಚಿತ್ರವನ್ನ ತಮಿಳು, ಹಿಂದಿ, ಮಲಯಾಳಂ ಭಾಷೆಗೆ ಡಬ್ ಮಾಡಲಾಗಿದೆ. ಈ ಮೂರು ಭಾಷೆಯಲ್ಲೂ ಕೋಟಿಗಟ್ಟಲೇ ಹಣ ಗಳಿಸಿರುವ ‘ಬಾಹುಬಲಿ’ ಕಲೆಕ್ಷನ್ ನಲ್ಲಿ ದಾಖಲೆ ಮಾಡಿದೆ.[ಕನ್ನಡಕ್ಕೆ ಡಬ್ಬಿಂಗ್ ಏಕೆ? ಹೋರಾಟ ಕುರಿತ ಈ ಕಿರುಚಿತ್ರ ನೋಡಿ.. ] 1000 ಕೋಟಿ ಗಳಿಸಿದ ‘ಬಾಹುಬಲಿ’ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಬಾಹುಬಲಿ ಕೇವಲ 10 ದಿನದಲ್ಲೇ 1000 ಕೋಟಿ ಗಳಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಸದ್ಯ, 1330 ಕೋಟಿ ಕಲೆಕ್ಷನ್ ಮಾಡಿರುವ ಬಾಹುಬಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜಮೌಳಿ ಮುಂದಿನ ಸಿನಿಮಾ? ಸದ್ಯಕ್ಕೆ ನಿರ್ದೇಶಕ ರಾಜಮೌಳಿ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಆಲೋಚಿಸಿಲ್ಲವಂತೆ. 2-3 ತಿಂಗಳ ಬ್ರೇಕ್ ತಗೊಂಡು ವಿಶ್ರಾಂತಿ ಪಡೆದುಕೊಳ್ಳಲಿದ್ದಾರಂತೆ.[ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ ‘ಫಾಸ್ಟ್ ಅಂಡ್ ಫ್ಯೂರಿಯಸ್ 8’ ]