‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ 150ನೇ ಸಿನಿಮಾ ‘ವಿಸ್ಮಯ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಸೂಪರ್ ಸ್ಟಾರ್ ರಜನಿಕಾಂತ್ ‘ವಿಸ್ಮಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಅರ್ಜುನ್ ಸರ್ಜಾ ಸೌತ್ ಸಿನಿಮಾ ರಂಗದ ದೊಡ್ಡ ನಟ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯ. ಸದ್ಯ 150 ಸಿನಿಮಾಗಳನ್ನ ಪೂರೈಸಿ ದೊಡ್ಡ ಸಾಧನೆ ಮಾಡಿದ್ದಾರೆ ಅರ್ಜುನ್ ಸರ್ಜಾ.

‘ವಿಸ್ಮಯ’ ಎನ್ನುವ ಪವರ್ ಫುಲ್ ಚಿತ್ರ ಅರ್ಜುನ್ ಸರ್ಜಾ ರವರ 150ನೇ ಸಿನಿಮಾವಾಗಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದ ಟೀಸರ್ ಸದ್ಯ ಟ್ರೆಂಡಿಂಗ್ ಆಗಿದೆ.