ರಸ್ತೆ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರ ಜ್ಯಾಗ್ವಾರ್ ಕಾರ್ ನ ಆರ್.ಟಿ.ಓ ಅಧಿಕಾರಿಗಳು ನಿನ್ನೆಯಷ್ಟೆ ವಶಪಡಿಸಿಕೊಂಡರು. ಇದೀಗ ಕಾಮಿಡಿ ನಟ ಬುಲೆಟ್ ಪ್ರಕಾಶ್ ಸರದಿ.

ಅರ್ಜುನ್ ಜನ್ಯ ಆಯ್ತು; ಈಗ ಬುಲೆಟ್ ಪ್ರಕಾಶ್ ಕಾರ್ ಸರದಿ
ಇಂದು ಬೆಳಗ್ಗೆ ಕಾಮಿಡಿ ಕಿಲಾಡಿ ಬುಲೆಟ್ ಪ್ರಕಾಶ್ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ತಮ್ಮ ಫಾರ್ಚ್ಯುನರ್ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದಕ್ಕಿದ್ದ ಹಾಗೆ, ಪೊಲೀಸರು ಅಡ್ಡ ಹಾಕಿ ಕಾರಿನ ಡಾಕ್ಯುಮೆಂಟ್ಸ್ ಕೇಳಿದ್ದಾರೆ.

ಬುಲೆಟ್ ಪ್ರಕಾಶ್ ಬರೋಬ್ಬರಿ 5.35 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ, ಆರ್.ಟಿ.ಓ ಅಧಿಕಾರಿಗಳು ಫಾರ್ಚ್ಯುನರ್ ಕಾರ್ ಮತ್ತದರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

5.35 ಲಕ್ಷ ತೆರಿಗೆ ಪಾವತಿ ಮಾಡಿದ ಬಳಿಕ, ಬುಲೆಟ್ ಪ್ರಕಾಶ್ ತಮ್ಮ ಕಾರ್ ನ ವಾಪಸ್ ಪಡೆಯಬಹುದು.