ರಸ್ತೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಸೇರಿದ ಕಾರನ್ನು ಆರ್.ಟಿ.ಓ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಅರ್ಜುನ್ ಜನ್ಯಾ ಅವರ, ಐಶಾರಾಮಿ ಕಾರು RTO ವಶಕ್ಕೆ!
ಬೆಂಗಳೂರಿನ ಗೊರಗೊಂಟೆಪಾಳ್ಯದಲ್ಲಿ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರ ಜಾಗ್ವಾರ್ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಮಾರು 10 ಲಕ್ಷ 25 ಸಾವಿರ ರೂಪಾಯಿ ರಸ್ತೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಹಾಗೂ ಕಳೆದ ಆರು ತಿಂಗಳಿನಿಂದ ತಾತ್ಕಾಲಿಕ ನೋಂದಣಿಯಲ್ಲಿ ಕಾರನ್ನು ಓಡಿಸುತ್ತಿದ್ದರು ಎಂಬ ಆರೋಪದ ಅಡಿಯಲ್ಲಿ ಅರ್ಜುನ್ ಜನ್ಯಾ ಅವರ ಅತ್ಯಂತ ಬೆಲೆಬಾಳುವ ಲಕ್ಷುರಿ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಎಪ್ರಿಲ್ ನಲ್ಲಿ ಸಿಲ್ವರ್ ಕಲರ್ ಜಾಗ್ವಾರ್ ಕಾರನ್ನು ಖರೀದಿಸಿದ್ದು, ಮೇ ತಿಂಗಳಿನವರೆಗೆ ಅವರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಅವರಿಗೆ ಅವಕಾಶ ಇದ್ದಿದ್ದು, ಆದರೆ ಅವರು ಮಾಡಿಸಿಕೊಳ್ಳದೆ ಟೆಂಪರರಿ ರಿಜಿಸ್ಟ್ರೇಷನ್ ನಲ್ಲಿ ರಸ್ತೆಯಲ್ಲಿ ಕಾರನ್ನು ಓಡಿಸುತ್ತಿದ್ದರು.

ಆದ್ದರಿಂದ ಎಂದಿನಂತೆ ಇವತ್ತು ಕೂಡ ಬೆಂಗಳೂರಿನ ಗೊರಗುಂಟೆಪಾಳ್ಯದ ರಸ್ತೆಯಲ್ಲಿ ಬರುತ್ತಿರಬೇಕಾದರೆ ಆರ್.ಟಿ.ಓ ಅಧಿಕಾರಿಗಳು ಕಾರನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಸುಮಾರು 50 ಲಕ್ಷ ಬೆಲೆಬಾಳುವ ಅತ್ಯಂತ ದುಬಾರಿ ಐಶಾರಾಮಿ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಪೂರ್ತಿ ಹಣ ಪಾವತಿಸಿದ ನಂತರ ಕಾರನ್ನು ವಾಪಸ್ ಪಡೆಯಬಹುದು ಎಂದು ಅಧಿಕಾರಿಗಳು ಅರ್ಜುನ್ ಜನ್ಯಾ ಅವರಿಗೆ ತಿಳಿಸಿ, ಮೂಲ ದಾಖಲೆಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.